ಸಿಇಟಿ ಫಲಿತಾಂಶ ಪ್ರಕಟ : ರಕ್ಷಿತ್, ವರುಣ್ ಗೌಡ, ಸಾಯಿ ವಿವೇಕ್ ಟಾಪರ್ಸ್ - Karavali Times ಸಿಇಟಿ ಫಲಿತಾಂಶ ಪ್ರಕಟ : ರಕ್ಷಿತ್, ವರುಣ್ ಗೌಡ, ಸಾಯಿ ವಿವೇಕ್ ಟಾಪರ್ಸ್ - Karavali Times

728x90

21 August 2020

ಸಿಇಟಿ ಫಲಿತಾಂಶ ಪ್ರಕಟ : ರಕ್ಷಿತ್, ವರುಣ್ ಗೌಡ, ಸಾಯಿ ವಿವೇಕ್ ಟಾಪರ್ಸ್

 

ಬೆಂಗಳೂರು (ಕರಾವಳಿ ಟೈಮ್ಸ್) : ಕರ್ನಾಟಕ ಪರೀಕ್ಷಾ ಮಂಡಳಿ ಕೆಸಿಇಟಿ-2020 ಫಲಿತಾಂಶವನ್ನು ಶುಕ್ರವಾರ ಮಧ್ಯಾಹ್ನ ಪ್ರಕಟಿಸಿದ್ದು, ರಕ್ಷಿತ್ , ವರುಣ್ ಗೌಡ ಹಾಗೂ ಸಾಯಿ ವಿವೇಕ್ ರಾಜ್ಯದಲ್ಲಿ ಅತ್ಯಧಿಕ‌ ರ್ಯಾಂಕ್‌ ಹೋಲ್ಡರ್ ಗಳಾಗಿ ಸಾಧನೆಗೈದಿದ್ದಾರೆ.

ನಗರದ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಛೇರಿಯಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಶುಕ್ರವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿದರು.

ಕೊರೋನಾ ಕಾರಣಕ್ಕೆ ವಿಳಂಬವಾಗಿದ್ದ ಸಿಇಟಿ ಪರೀಕ್ಷೆ ನಡೆದು ಕೇವಲ 20 ದಿನಗಳಲ್ಲಿ ಫಲಿತಾಂಶ ಹೊರಬಿದ್ದಿದೆ.

 ಇಂಜಿನಿಯರಿಂಗ್ ಕೋರ್ಸ್ ಗಾಗಿ 1,94,419 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ  1,75,349 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 1,53,470 ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗಿದೆ.

ಕೃಷಿ ವಿಭಾಗದಲ್ಲಿ 1,27,627, ಪಶುವೈದ್ಯಕೀಯ ವಿಭಾಗದಲ್ಲಿ 1,29,666, ಬಿಫಾರ್ಮಾ, ಡಿಫಾರ್ಮಾ ವಿಭಾಗದಲ್ಲಿ 1,55,552 ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದ್ದಾರೆ.

 ಈ ಬಾರಿ 63 ಕೊರೋನಾ ಸೋಂಕಿತ ವಿದ್ಯಾರ್ಥಿಗಳೂ ಪರೀಕ್ಷೆ ಬರೆದಿದ್ದು ಅವರಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರ ವ್ಯವಸ್ಥೆ ಮಾಡಲಾಗಿತ್ತು,

ಇಂದು ಮಧ್ಯಾಹ್ನ 1 ಗಂಟೆಯಿಂದ https://www.karresults.nic.in ವೆಬ್ ಸೈಟಿನಲ್ಲಿ ಫಲಿತಾಂಶ ಲಭ್ಯವಾಗಲಿದೆ.


ಟಾಪರ್ಸ್ ಗಳ ವಿವರ ಈ ಕೆಳಗಿದೆ

ಇಂಜಿನಿಯರಿಂಗ್

1. ರಕ್ಷಿತ್ ಎಂ, ಆರ್ ವಿ ಕಾಲೇಜು, ಬೆಂಗಳೂರು 

2. ಶುಭಾನ್ ಆರ್ - ಶ್ರೀ ಚೈತನ್ಯ ಇ ಟೆಕ್ನೋ ಶಾಲೆ, ಬೆಂಗಳೂರು 

3. ಶಶಾಂಕ್ ಬಾಲಾಜಿ, ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ


ಕೃಷಿ

1. ವರುಣ್ ಗೌಡ ಎ ಬಿ, ಎಕ್ಸ್ ಪರ್ಟ್ ಕಾಲೇಜು, ಮಂಗಳೂರು 

2. ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು 

3. ಲೋಕೇಶ್ ವಿ ಜೋಗಿ, ಶ್ರೀ ರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು, ಮೈಸೂರು


ಪಶುವೈದ್ಯಕೀಯ

1. ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು 

2. ಆರ್ಯನ್ ಮಹಲಿಂಗಪ್ಪ ಚನ್ನಾಳ್, ಪ್ರಗತಿ ಪಬ್ಲಿಕ್ ಸೆಕೆಂಡರಿ ಶಾಲೆ, ಕೋಟ

3. ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು


ಬಿಫಾರ್ಮಾ, ಡಿಫಾರ್ಮಾ


1. ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು 

2. ಸಂದೀಪನ್ ನಸ್ಕರ್, ಹೊರನಾಡ ಕನ್ನಡಿಗ 

3. ಪವನ್ ಎಸ್ ಗೌಡ, ನಾರಾಯಣ ಪಿಯು ಕಾಲೇಜು, ಬೆಂಗಳೂರು







  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ ಫಲಿತಾಂಶ ಪ್ರಕಟ : ರಕ್ಷಿತ್, ವರುಣ್ ಗೌಡ, ಸಾಯಿ ವಿವೇಕ್ ಟಾಪರ್ಸ್ Rating: 5 Reviewed By: karavali Times
Scroll to Top