ಪೋರ್ಟ್ ಆಫ್ ಸ್ಪೇನ್ (ಕರಾವಳಿ ಟೈಮ್ಸ್) : ಇಂಗ್ಲಂಡ್ ವೇಗಿ ಜೇಮ್ಸ್ ಆಂಡರ್ಸನ್ ಇತ್ತೀಚೆಗಷ್ಟೆ ಟೆಸ್ಟ್ ಕ್ರಿಕೆಟ್‍ನಲ್ಲಿ 600 ವಿಕೆಟ್ ಪಡೆದು ಮೊದಲ ವೇಗದ ಬೌಲರ್ ಆಗಿ ಗುರುತಿಸಿಕೊಂಡ ಬೆನ್ನಲ್ಲೇ ಇದೀಗ 500 ಟ್ವೆಂಟಿ-20 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವೆಸ್ಟ್ ಇಂಡೀಸ್ ತಂಡದ ಆಟಗರ ಡ್ವೇನ್ ಬ್ರಾವೋ ಪಾತ್ರರಾಗಿದ್ದಾರೆ.
36 ವರ್ಷದ ಆಲ್ ರೌಂಡರ್ ಬ್ರಾವೋ ತವರುನಾಡು ಟ್ರಿನಿಡಾಡ್‍ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯಾಟದಲ್ಲಿ ಈ ಸಾಧನೆಗೈದು ಸುದ್ದಿಯಾಗಿದ್ದಾರೆ. ಟ್ರಿಬ್ಯಾಗೊ ನೈಟ್ ರೈಡರ್ಸ್ ಪರ ಆಡುತ್ತಿರುವ ಬ್ರಾವೋ, ಸೇಂಟ್ ಲೂಸಿಯಾ ಜೋಕ್ಸ್ ತಂಡದ ರಖೀಮ್ ಕಾರ್ನವಾಲ್ ಅವರ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
0 comments:
Post a Comment