ಮಂಗಳೂರು (ಕರಾವಳಿ ಟೈಮ್ಸ್) : ತಾಲೂಕಿನ ಉಳ್ಳಾಲ ಸಮೀಪದ ಸೋಮೇಶ್ವರ ಗ್ರಾಮದ ಉಚ್ಚಿಲ-ಗುಡ್ಡೆ ನಿವಾಸಿ ರಹೀಂ ಎಂಬವರ 8 ವರ್ಷದ ಅಪ್ರಾಪ್ತ ಪುತ್ರ ಫೈಝಾನ್ ಎಂಬಾತ ಗಂಟಲಲ್ಲಿ ಚಾಕಲೇಟ್ ಸಿಲುಕಿ ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ.
ಚಾಕಲೇಟ್ ತಿನ್ನುವಾಗ ಬಾಲಕನ ಗಂಟಲಲ್ಲಿ ಸಿಲುಕಿಕೊಂಡಿದ್ದರಿಂದ ಶ್ವಾಸ ಬಿಡಲು ಕಷ್ಟವಾಗಿದ್ದು, ತಕ್ಷಣ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
0 comments:
Post a Comment