ಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಬೋಗೋಡಿ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.
ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಧ್ವಜಾರೋಹಣಗೈದರು. ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾವ್, ಎಸ್‍ಡಿಎಂಸಿ ಸದಸ್ಯ ಮುಸ್ತಫಾ ಬೋಗೋಡಿ, ಅಂಗನವಾಡಿ ಕಾಯರ್ತಕರ್ತೆ ವಿನ್ನಿಫ್ರೆಡ್, ಪ್ರಮುಖರಾದ ಮುಹಮ್ಮದ್ ಕೈಫ್ ಗುಡ್ಡೆಅಂಗಡಿ, ಹಫೀಝ್ ಗುಡ್ಡೆಅಂಗಡಿ, ಮಜೀದ್ ಮೇಸ್ತ್ರಿ ಬೋಗೋಡಿ, ಲವೀನಾ ಪ್ರಮೀಳಾ ಮಾರ್ಟಿಸ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment