ಬೆಳ್ತಂಗಡಿ (ಕರಾವಳಿ ಟೈಮ್ಸ್) : ತಾಲೂಕಿನ ಉಜಿರೆ ಗ್ರಾಮದ ಕಡಂಬಿಲ ಎಂಬಲ್ಲಿ ಶನಿವಾರ ಬೆಳಿಗ್ಗೆ ಆಡು ಮೇಯಿಸುತ್ತಿದ್ದ ಯುವತಿಯನ್ನು ಆರೋಪಿ ಕೊಯ್ಯೂರು ಗ್ರಾಮದ ನಿವಾಸಿ ಇಕ್ಬಾಲ್ ಸಾದಿಕ್ (27) ಎಂಬಾತ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ಬೆಳಿಗ್ಗೆ 11-11.30 ರ ಅವಧಿಯಲ್ಲಿ ಯುವತಿ ಕಡಂಬಿಲ ಎಂಬಲ್ಲಿ ಆಡುಗಳನ್ನು ಮೇಯಿಸಿಕೊಂಡು ಹೋಗುತ್ತಿರುವಾಗ ಆರೋಪಿ ಮೋಟಾರು ಸೈಕಲಿನಲ್ಲಿ ಬಂದು ಯುವತಿಯನ್ನು ತಡೆದು ನಿಲ್ಲಿಸಿ, ಲೈಂಗಿಕ ದೌರ್ಜನ್ಯವೆಸಗಿದ್ದಲ್ಲದೆ ಆಕೆ ಪ್ರತಿರೋಧ ತೋರಿದಾಗ ಆಕೆಗೆ ಜೀವಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಕಲಂ: 341 354 354 (ಎ), 506 ಐಪಿಸಿ ಸೆಕ್ಷನ್ 3(1) ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಸಾದಿಕ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
0 comments:
Post a Comment