ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ-ಕೆಳಗಿನಪೇಟೆಯ ಎಸ್ಕೆಎಸ್ಸೆಸ್ಸೆಫ್ ಕಛೇರಿ ಮುಂಭಾಗದಲ್ಲಿ ದೇಶದ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶಾಖಾಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಧ್ವಜಾರೋಹಣಗೈದರು. ಸ್ಥಳೀಯ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಶಾಖಾ ಉಪಾಧ್ಯಕ್ಷ ಸವಾಝ್ ಬಂಟ್ವಾಳ ಮುಖ್ಯ ಭಾಷಣಗೈದರು. ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ ಪ್ರತಿಜ್ಞಾ ಭೋಧನೆಗೈದರು.
ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಮೂನಿಷ್ ಅಲಿ, ಎಸ್ಕೆಎಸ್ಸೆಸ್ಸೆಫ್ ಶಾಖಾ ಕೋಶಾಧಿಕಾರಿ ರಫೀಕ್ ಅಹ್ಮದ್ ಬಿ.ಕೆ., ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ವಾಚ್, ಪ್ರಮುಖರಾದ ಶಾಫಿ ಶೂ ಮಹಲ್, ಇಸ್ಮಾಯಿಲ್ ಅರಬಿ, ಮುಹಮ್ಮದ್ ನಿಶಾಂ, ಝಹೂರುಲ್ಲಾ ಬಿ.ಎಚ್.ಬಿ., ಬಶೀರ್ ಬಸ್ತಿಪಡ್ಪು, ಬಿಲಾಲ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಬಂಟ್ವಾಳ ಜಮಾಅತ್ ವ್ಯಾಪ್ತಿಯ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
0 comments:
Post a Comment