ಬಂಟ್ವಾಳ (ಕರಾವಳಿ ಟೈಮ್ಸ್) : ದೇಶದ 74ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಬಂಟ್ವಾಳ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳಿಗೆ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪುರಸಭಾ ಸದಸ್ಯರಾದ ಜನಾರ್ಧನ್ ಚಂಡ್ತಿಮಾರ್, ಗಂಗಾಧರ್, ವಾಸು ಪೂಜಾರಿ, ಪ್ರಮುಖರಾದ ಪ್ರಶಾಂತ್ ಕುಲಾಲ್, ಪ್ರವೀಣ್ ಕಿಣಿ, ಜಗನ್ನಾಥ್ ತುಂಬೆ, ಮಹಾಬಲ ಬಂಗೇರ, ವೆಂಕಪ್ಪ ಪೂಜಾರಿ, ಪವನ್ ಆಳ್ವ, ಡಾ ಪುಷ್ಪಲತಾ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment