ಬೆಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ಹಿನ್ನೆಲೆಯಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ನೀಡಲು ರಾಜ್ಯ ಸರಕಾರ ಹೆಚ್ಚುವರಿಯಾಗಿ 57.51 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರಾಜ್ಯ ಸರಕಾರ ಪ್ರಕಟಿಸಿದ್ದ ಸಹಾಯಧನದ ಫಲಾನುಭವಿಗಳಾದ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಂದ ಪರಿಹಾರ ಧನ ಕೋರಿ 2,45,253 ಅರ್ಜಿಗಳನ್ನು ಸೇವಾ ಸಿಂಧು ವೆಬ್ ಪೆÇೀರ್ಟಲ್ ಮೂಲಕ ಸ್ವೀಕರಿಸಲಾಗಿದೆ.
ಈ ಪೈಕಿ 1,19,577 ಮಂದಿ ಫಲಾನುಭವಿಗಳಿಗೆ ಈಗಾಗಲೇ ನೇರವಾಗಿ ನಗದು ವರ್ಗಾವಣೆ (ಡಿಬಿಟಿ) ಮೂಲಕ ಅವರ ಬ್ಯಾಂಕ್ ಖಾತೆಗೆ ಪರಿಹಾರ ಧನವನ್ನು ಜಮೆ ಮಾಡಲಾಗಿದೆ. ಬಾಕಿ ಉಳಿದ ಫಲಾನುಭವಿಗಳಿಗೆ ವಿತರಿಸಲು 57.51 ಕೋಟಿ ರೂಪಾಯಿಗಳ ಹೆಚ್ಚುವರಿ ಅನುಧಾನವನ್ನು ರಾಜ್ಯ ಸರಕಾರ ಇದೀಗ ಬಿಡುಗಡೆ ಮಾಡಿದೆ.
0 comments:
Post a Comment