ಬಂಟ್ವಾಳ (ಕರಾವಳಿ ಟೈಮ್ಸ್) : ಅಮೆಚೂರು ಕಬಡ್ಡಿ ಎಸೋಸಿಯೇಶನ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ಬಂಟ್ವಾಳ-ವಿದ್ಯಾಗಿರಿ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಮಿಥಿಲ್ ಜೆ ಅವರನ್ನು ಶನಿವಾರ ಬಿ ಸಿ ರೋಡು ಪರ್ಲಿಯದಲ್ಲಿರು ನಿವಾಸದಲ್ಲಿ ಸನ್ಮಾನಿಸಲಾಯಿತು.
ಅಮೆಚೂರು ಸದಸ್ಯ, ಕಾವಳಕಟ್ಟೆ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಹಾಗೂ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಅನಿತಾ ದಂಪತಿಗಳ ಪುತ್ರನಾಗಿರುವ ಮಿಥಿಲ್ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 615 ಅಂಕಗಳೊಂದಿಗೆ ಶೇಕಡಾ 98.4 ಪಲಿತಾಂಶ ದಾಖಲಿಸಿದ್ದರು.
ಈ ಸಂದರ್ಭ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಅದ್ಯಕ್ಷ ಬೇಬಿ ಕುಂದರ್, ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಕರ್ಣ, ಗೌರವಾದ್ಯಕ್ಷ ಮಂಜುನಾಥ್, ಕಾರ್ಯಾದ್ಯಕ್ಷ ಪುಷ್ಪರಾಜ್ ಚೌಟ, ಉಪಾದ್ಯಕ್ಷರುಗಳಾದ ಲೋಕನಾಥ ಶೆಟ್ಟಿ, ಬಾಬು ಮಾಸ್ಟರ್, ಸೇಸಪ್ಪ ಮಾಸ್ಟರ್, ಜೊತೆ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ರೆಫ್ರಿ ಬೋರ್ಡ್ ಕನ್ವೀನರ್ ಕೃಷ್ಣಪ್ಪ ಬಂಗೇರ, ಕೋಶಾಧಿಕಾರಿ ಉಮಾನಾಥ ರೈ ಮೇರಾವು, ಮಾಜಿ ಯೋಧ ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment