ಬಂಟ್ವಾಳ (ಕರಾವಳಿ ಟೈಮ್ಸ್) : ಆಲಡ್ಕ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಇವುಗಳ ಜಂಟಿ ಆಶ್ರಯದಲ್ಲಿ ದೇಶದ 74 ನೇ ಸ್ವಾತಂತ್ರ್ಯೋತ್ಸವ ಹಾಗೂ ಫ್ರೀಡಂ ಸ್ಕ್ವಾಯರ್ ಶನಿವಾರ ಆಚರಿಸಲಾಯಿತು.
ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೊ ಧ್ವಜಾರೋಹಣಗೈದರು. ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರ್ ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಉಧ್ಘಾಟಿಸಿದರು. ಶಾಖಾ ಉಪಾಧ್ಯಕ್ಷ ಮಜೀದ್ ಬೋಳಂಗಡಿ, ಕೋಶಾಧಿಕಾರಿ ಪಿ.ಬಿ. ಅಹ್ಮದ್ ಹಾಜಿ, ಪದಾಧಿಕಾರಿಗಳಾದ ಇಸಾಕ್ ಫೇಶನ್ ವೇರ್, ಮುಹಮ್ಮದ್ ಶಫೀಕ್, ರಫೀಕ್ ಇನೋಲಿ, ಅಬ್ದುಲ್ ಜಬ್ಬಾರ್ ಬುರ್ಖಾ, ಹನೀಫ್ ಬೋಗಡಿ, ಸವಾದ್ ಗೂಡಿನಬಳಿ, ಇರ್ಷಾದ್ ಗೂಡಿನಬಳಿ, ಉಮ್ಮರ್ ಫಾರೂಕ್ ಆಲಡ್ಕ ಮೊದಲಾದವರು ಭಾಗವಹಿಸಿದ್ದರು. ಶಾಖಾ ಸದಸ್ಯ ಅಬ್ದುಲ್ ಅಝೀಝ್ ಪಿ.ಐ. ಸ್ಬಾಗತಿಸಿ, ಪ್ರಧಾನ ಕಾರ್ಯದರ್ಶಿ ಬಶೀರ್ ಬೇಕರಿ ವಂದಿಸಿದರು.
ಇದೇ ವೇಳೆ ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ನಿರ್ದೇಶನದಂತೆ ಶಾಖಾ ಸದಸ್ಯರು ಮಾನವ ಸರಪಳಿ ನಿರ್ಮಿಸಿ ಫ್ರೀಡಂ ಸÁ್ಕ್ವ್ಯರ್ ಪ್ರತಿಜ್ಞಾ ಭೋದನೆಗೈದರು. ಮರ್‍ಹೂಂ ಶೈಖುನಾ ಸಿ.ಎಂ. ಉಸ್ತಾದ್ ಕೊಲೆಯ ಮರು ತನಿಖೆಗೊಳಪಡಿಸಲು ಆಗ್ರಹಿಸಿ ಭಿತ್ತಿ ಪತ್ರ ಪ್ರದರ್ಶಿಸಲಾಯಿತು.
0 comments:
Post a Comment