ಮಂಗಳೂರು (ಕರಾವಳಿ ಟೈಮ್ಸ್) : ಕೋರೋನಾ ನಿಯಂತ್ರಿಸುವುದರಲ್ಲಿ ಗೃಹಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಕಾವೂರ್ ಪೊಲೀಸ್ ಠಾಣಾ ಎಎಸ್ಸೈ ಜಗನಾಥ್ ಕೆ ಅಭಿಪ್ರಾಯಪಟ್ಟರು.
ಅಂತರ್ರಾಷ್ಟ್ರೀಯ ಗೃಹ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಲೇಬರ್ ಕಚೇರಿ ಮಂಗಳೂರು ಮತ್ತು ಸ್ತ್ರೀ ಜಾಗೃತಿ ಸಮಿತಿ ಮಂಗಳೂರು ಇವುಗಳ ವತಿಯಿಂದ ಸ್ಥಳೀಯ ಗೃಹ ಕಾರ್ಮಿಕರಿಗೆ ಸ್ಯಾನಿಟೈಸರ್ ಮತ್ತು ಸಾಬೂನು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋರೋನಾದಿಂದ ನಾವೆಲ್ಲರೂ ಜಾಗೃತರಾಗಬೇಕು. ವಿಶೇಷವಾಗಿ ಗೃಹ ಕಾರ್ಮಿಕರು ಕರ್ತವ್ಯ ನಿರ್ವಹಿಸುವಾಗ ತಮ್ಮ ರಕ್ಷಣಾ ಕವಚಗಳನ್ನು ಬಳಸಿ ಕಾರ್ಯನಿರ್ವಹಿಸಬೇಕು ಎಂದರು.
ಮಂಗಳೂರು ಸ್ತ್ರೀ ಜಾಗೃತಿ ಸಮಿತಿ ಸಂಚಾಲಕಿ ಡಾ. ಸಂಸದ್ ಕುಂಜತ್‍ಬೈಲ್ ಮಾತನಾಡಿ ಗೃಹ ಕಾರ್ಮಿಕರು ಸ್ವಯಂ ಸ್ವಚ್ಛತೆಯಿಂದ ಇದ್ದು ಇತರರ ಸೇವೆ ಮಾಡಬೇಕು. ಗೃಹ ಕಾರ್ಮಿಕರ ಅರೋಗ್ಯ ಕೂಡ ಪ್ರಾಮುಖ್ಯವಾಗಿದೆ ಎಂದರು.
ಕುಂಜತ್‍ಬೈಲ್ ಅಂಗನವಾಡಿ ಕಾರ್ಯಕರ್ತೆ ಶಾಮಲತಾ ಕುಂಜತ್‍ಬೈಲ್, ಗೃಹ ಕಾರ್ಮಿಕ ಹಕ್ಕುಗಳ ಒಕ್ಕೂಟದ ಕಾರ್ಯದರ್ಶಿ ಸೀತಾ ಮೊದಲಾದವರು ಉಪಸ್ಥಿತರಿದ್ದರು. ಹರ್ಷಿದ್ ಸ್ವಾಗತಿಸಿ, ಸದಸ್ಯೆ ಹೊನ್ನಮ್ಮ ವಂದಿಸಿದರು.
0 comments:
Post a Comment