ವಿಟ್ಲ : ಬಾರ್ ಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಮದ್ಯದ ಬಾಟ್ಲಿ ಕಳವು - Karavali Times ವಿಟ್ಲ : ಬಾರ್ ಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಮದ್ಯದ ಬಾಟ್ಲಿ ಕಳವು - Karavali Times

728x90

8 July 2020

ವಿಟ್ಲ : ಬಾರ್ ಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಮದ್ಯದ ಬಾಟ್ಲಿ ಕಳವು



ವಿಟ್ಲ (ಕರಾವಳಿ ಟೈಮ್ಸ್) : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಅಡ್ಕ ಎಂಬಲ್ಲಿ ನೂತನ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಮದ್ಯದ ಬಾಟ್ಲಿಗಳನ್ನು ಕಳವುಗೈದಿದ್ದಾರೆ.

 ಜುಲೈ 7 ರ ರಾತ್ರಿ 8 ಗಂಟೆಯಿಂದ ಜುಲೈ  8 ರಂದು ಬೆಳಿಗ್ಗೆ 9.30 ರ ಮಧ್ಯೆ ಬಾರ್ ಕಟ್ಟಡದ ಹಿಂಭಾಗದ ಬಾಗಿಲು ಹಾಗೂ ಅದರ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

ಕಳ್ಳರು ದೋಚಿದ ಸೊತ್ತುಗಳ ಒಟ್ಟು ಮೌಲ್ಯ 49,656/- ರೂಪಾಯಿಗಳು ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಬಾರ್ ಮ್ಯಾನೇಜರ್ ರಾಕೇಶ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ :  457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.








  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲ : ಬಾರ್ ಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಮದ್ಯದ ಬಾಟ್ಲಿ ಕಳವು Rating: 5 Reviewed By: karavali Times
Scroll to Top