ವಿಟ್ಲ (ಕರಾವಳಿ ಟೈಮ್ಸ್) : ಕೊರೋನಾ ಪಾಸಿಟಿವ್ ವರದಿ ಬಂದರೆ ಅವರ ಮನೆಗಳನ್ನು ಸ್ಥಳೀಯಾಡಳಿತ ಸೀಲ್‍ಡೌನ್ ಮಾಡುತ್ತದೆ. ಸೀಲ್‍ಡೌನ್ ಮಾಡಿದ ಮನೆಗಳ ಸದಸ್ಯರು ಹದಿನಾಲ್ಕು ದಿನಗಳ ಕಾಲ ಮನೆಯಿಂದ ಹೊರಗೆ ಬರಲು ಅವಕಾಶ ಇರುವುದಿಲ್ಲ. ಈ ಸಮಯದಲ್ಲಿ ಆ ಮನೆಯವರಿಗೆ ಬೇಕಾದ ಅವಶ್ಯಕ ಸಾಮಾಗ್ರಿಗಳನ್ನು ತಲುಪಿಸುವುದು ಸ್ಥಳೀಯಾಡಳಿತದ ಜವಬ್ದಾರಿಯಾಗಿದೆ. ಅದರೆ ಸ್ಥಳೀಯಾಡಳಿತವು ಕೇವಲ ಮನೆಗಳನ್ನು ಸೀಲ್‍ಡೌನ್ ಮಾಡಿದ ನಂತರ ಆ ಮನೆಗಳ ಬಗ್ಗೆ ಯಾವುದೇ ಗಮನ ಹರಿಸದೇ ಇರುವ ಬಗ್ಗೆ ವರದಿಯಾಗುತ್ತಿದೆ ಇದು ಸರಿಯಲ್ಲ ಎಂದು ವಿಟ್ಲ ಡಿವೈಎಫ್ ಹೇಳಿದೆ.
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಕೊರೋನಾ ಪಾಸಿಟಿವ್ ವರದಿ ಆಗಿರುವುದರಿಂದ ಕೆಲ ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ವಿಟ್ಲ ಪಟ್ಟಣ ಪಂಚಾಯತ್ ಆಗಲಿ, ಕಂದಾಯ ಇಲಾಖೆಯಾಗಲಿ ಆ ಮನೆಯವರಿಗೆ ಯಾವುದೇ ಸಾಮಾಗ್ರಿ ವಿತರಿಸಿರುವುದಿಲ್ಲ. ಸ್ಥಳೀಯ ಆಡಳಿತದ ಈ ವರ್ತನೆಯು ತೀವ್ರ ನಿರ್ಲಕ್ಷ್ಯದ ಅತಿರೇಕವಾಗಿದೆ ಎಂದು ಡಿ.ವೈ.ಎಫ್.ಐ ಆರೋಪಿಸಿದೆ.
ಸೀಲ್‍ಡೌನ್ ಮಾಡುವಾಗ ಮನೆಯ ಸದಸ್ಯರ ಜೊತೆ ಅಧಿಕಾರಿಗಳು ಅಸಭ್ಯ ರೀತಿಯಲ್ಲಿ ವರ್ತಿಸುವ ಘಟನೆಗಳು ಕೂಡಾ ನಡೆಯುತ್ತಿದ್ದು, ಅಧಿಕಾರಿಗಳ ಈ ರೀತಿಯ ವರ್ತನೆಯನ್ನು ಡಿ.ವೈ.ಎಫ್.ಐ ತೀವ್ರವಾಗಿ ಖಂಡಿಸುತ್ತದೆ ಹಾಗೂ ಸೀಲ್‍ಡೌನ್ ಮಾಡಿದ ಮನೆಗಳಿಗೆ ಜೀವನಕ್ಕೆ ಅವಶ್ಯಕವಾಗಿರುವ ಸಾಮಾಗ್ರಿಗಳನ್ನು ಒದಗಿಸಬೇಕು ಎಂದು ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿಯು ಸ್ಥಳೀಯಾಡಳಿತವನ್ನು ಒತ್ತಾಯಿಸುತ್ತದೆ ಎಂದು ಡಿವೈಎಫ್‍ಐ ವಿಟ್ಲ ವಲಯ ಸಮಿತಿ ಅಧ್ಯಕ್ಷ ನಿಜುಂ ಅಳಿಕೆ ಹಾಗೂ ಕಾರ್ಯದರ್ಶಿ ಜಮೀಲ್ ಎಂ ತಿಳಿಸಿದ್ದಾರೆ.
0 comments:
Post a Comment