ಮಂಗಳೂರು (ಕರಾವಳಿ ಟೈಮ್ಸ್) : ಮಾಜಿ ಆರೋಗ್ಯ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್ ಅವರ ಗನ್‍ಮ್ಯಾನ್ ಪೊಲೀಸ್ ಕಾನ್ಸ್ ಟೇಬಲಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಖಾದರ್ ಅವರ ಬೆಂಗಾವಲು ವಾಹನದಲ್ಲಿ ಗನ್‍ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ಡಿಎಆರ್ ಪೊಲೀಸ್ ಸಿಬ್ಬಂದಿಯಾಗಿರುವ ಇವರು ಕಳೆದ ಹತ್ತು ದಿನಗಳಿಂದ ಜ್ವರ ಕಾರಣದಿಂದ ಮನೆಗೆ ತೆರಳಿದ್ದರು. ಅವರನ್ನು ಕೊರೋನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಇಂದು ಅದರ ವರದಿ ಬಂದಿದ್ದು, ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಇವರ ಪಾಸಿಟಿವ್ ವರದಿಯ ಹಿನ್ನಲೆಯಲ್ಲಿ ಇವರ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇತರ ಮೂರು ಮಂದಿ ಪೊಲೀಸ್ ಸಿಬ್ಬಂದಿಗಳನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಈ ಮಧ್ಯೆ ಕ್ಷೇತ್ರದಲ್ಲಿ ನಿರಂತರ ಸಂಚಾರ ಮಾಡುತ್ತಿರುವ ಶಾಸಕ ಖಾದರ್ ಕೂಡಾ ನಾಲ್ಕು ಬಾರಿ ಕೊರೋನಾ ತಪಾಸಣೆ ನಡೆಸಿದ್ದು ಎಲ್ಲವೂ ನೆಗೆಟಿವ್ ವರದಿ ಬಂದಿದೆ.
0 comments:
Post a Comment