ಮಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ನಿರ್ಬಂಧದ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮ ವಹಿಸಿಕೊಂಡು ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ಅವರು ಶುಕ್ರವಾರ ಬಕ್ರೀದ್ ಹಬ್ಬದ ಪ್ರಾರ್ಥನೆಯನ್ನು ಮನೆಯಲ್ಲೇ ಕುಟುಂಬಸ್ಥರ ಜೊತೆ ಸೇರಿ ನಡೆಸಿದರು.
ಕೋವಿಡ್ ವೈರಸ್ ಹಿನ್ನಲೆಯಲ್ಲಿ ಮಂಗಳೂರು ಈದ್ಗಾ ಮೈದಾನ ಹಾಗೂ ಝೀನತ್ ಭಕ್ಷ್ ಮಸೀದಿಯಲ್ಲಿ ಬಕ್ರಿದ್ ಪ್ರಯುಕ್ತ ಸಾಮೂಹಿಕ ನಮಾಝ್‍ಗೆ ನಿರ್ಬಂಧ ಹೇರಲಾಗಿರುವ ಹಿನ್ನಲೆಯಲ್ಲಿ ಯು ಟಿ ಖಾದರ್ ಅವರು ಸರಕಾರದ ಮಾರ್ಗಸೂಚಿ ಅನುಸರಿಸುವ ನಿಟ್ಟಿನಲ್ಲಿ ಮನೆಯಲ್ಲೇ ಕುಟುಂಬಸ್ಥರೊಂದಿಗೆ ಈದ್ ನಮಾಝ್ ನಿರ್ವಹಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಬಳಿಕ ನಾಡಿನ ಸಮಸ್ತ ಜನತೆಗೆ ಈದ್ ಶುಭಾಶಯ ಕೋರಿದ ಶಾಸಕ ಖಾದರ್ ಅವರು ತ್ಯಾಗ-ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬ ಜನತೆಗೆ ಒಳಿತನ್ನು ಉಂಟು ಮಾಡಲಿ. ಹಾಗೂ ಸಮೃದ್ದ ಕರ್ನಾಟಕ ಹಾಗೂ ಭಾರತ ನಿರ್ಮಾಣಕ್ಕೆ ಬಕ್ರೀದ್ ಹಬ್ಬ ಹೇತುವಾಗಲಿ ಎಂದು ಆಶಿಸಿದರು. ಇದೇ ವೇಳೆ ಹಿಂದೂ ಸಹೋದರರು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ನಾಡಿನ ಸಮಸ್ತ ಹಿಂದೂ ಬಾಂಧವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಿದರು.
0 comments:
Post a Comment