ಬಂಟ್ವಾಳ (ಕರಾವಳಿ ಟೈಮ್ಸ್) : ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಮತ್ತು ಅವರ ಪತ್ನಿಗೆ ಕೋರೋನಾ ವೈರಸ್ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಶೀಘ್ರ ಗುಣಮುಖರಾಗುವಂತೆ ತಾಯಿ ರಕ್ತೇಶ್ವರಿ ಅಮ್ಮನವರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ಜಿಲ್ಲಾ ಇಂಟಕ್ ಪ್ರದಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಉಪಾಧ್ಯಕ್ಷ ಸುರೇಶ್ ಪೂಜಾರಿ ಜೋರ, ಪ್ರಮುಖರಾದ ಸೋಮನಾಥ್ ಚಂಡ್ತಿಮಾರ್, ಗಣೇಶ್ ನಾಯ್ಕ್, ಸಂತೋಷ್ ಕುಮಾರ್, ಲೋಕೇಶ್ ಸುವರ್ಣ, ರಂಜಿತ್ ಪೂಜಾರಿ ನಂದರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment