ಬಂಟ್ವಾಳ (ಕರಾವಳಿ ಟೈಮ್ಸ್) : ಸಜಿಪನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲಗುತ್ತು ಪ್ರದೇಶದಲ್ಲಿ ಚರಂಡಿ ನಿರ್ವಹಣೆಯಲ್ಲಿ ಗ್ರಾಮ ಪಂಚಾಯತ್ ನಿರ್ಲಕ್ಷ್ಯ ತೋರಿದ ಪರಿಣಾಮ ಇಡೀ ಪ್ರದೇಶವು ಜಲಾವೃತವಾಗಿದ್ದು ಸ್ಥಳಕ್ಕೆ ಕ್ಷೇತ್ರದ ಶಾಸಕರು ಬೇಟಿನೀಡಿ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹಿನ್ನಲೆಯಲ್ಲಿ ಪಂಚಾಯತ್ ಅಧಿಕಾರಿಗಳು ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳ ಮುಖಾಂತರ ಚರಂಡಿಯ ಹೂಲೆತ್ತುವ ಕೆಲಸವನ್ನು ಕೈಗೊಂಡಿದ್ದಾರೆ.
ಇಲ್ಲಿನ ಪಂಚಾಯತ್ ಆಡಳಿತಕ್ಕೆ ಸ್ಥಳೀಯವಾಸಿಗಳು ಇಲ್ಲಿನ ಚರಂಡಿ ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರಿಕೊಂಡರೂ ಪ್ರಯೋಜನವಾಗಿರಲಿಲ್ಲ. ಇದೀಗ ಪಂಚಾಯತ್ ಆಡಳಿತ ಕೊನೆಗೊಂಡಿದ್ದು, ಆಡಳಿತಾಧಿಕಾರಿ ನೇಮಕವಾಗಿರುವ ಸಂಧರ್ಭದಲ್ಲಿ ಆಡಳಿತಾಧಿಕಾರಿಯ ಮುಖಾಂತರ ಗ್ರಾಮ ಪಂಚಾಯತಿನಿಂದಲೇ ಚರಂಡಿಯ ಹೂಲೆತ್ತುವ ಕಾರ್ಯವನ್ನು ನಡೆಸಲಾಗುತ್ತಿದೆ.
0 comments:
Post a Comment