ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಕಛೇರಿ ಬಂಟ್ವಾಳಕ್ಕೆ : ಸತೀಶ್ ಶೆಟ್ಟಿ - Karavali Times ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಕಛೇರಿ ಬಂಟ್ವಾಳಕ್ಕೆ : ಸತೀಶ್ ಶೆಟ್ಟಿ - Karavali Times

728x90

4 July 2020

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಕಛೇರಿ ಬಂಟ್ವಾಳಕ್ಕೆ : ಸತೀಶ್ ಶೆಟ್ಟಿ



ಬಂಟ್ವಾಳ (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ ಜಿಲಾ ಸಮಿತಿಯು ಗ್ರಾಮೀಣ ಮಟ್ಟದಲ್ಲಿ ಸಂಘಟನೆಗೆ ಪ್ರಾಮುಖ್ಯತೆಯನ್ನು ನೀಡುವ ಮೂಲಕ ಗ್ರಾಮಮಟ್ಟದಲ್ಲಿ ಸಾಮುದಾಯಿಕ ಸೇವೆಗೆ ಪ್ರಾಮುಖ್ಯತೆಯನ್ನು ನೀಡಿ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ತಿಳಿಸಿದರು.

ಬಂಟ್ವಾಳದಲ್ಲಿ ನಿರ್ಮಿಸಲಾದ ಯೋಜನೆಯ ನೂತನ ಕಟ್ಟಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 22 ಸಾವಿರ ಸಂಘಗಳನ್ನು ಹೊಂದಿದ್ದು, 748 ಒಕ್ಕೂಟಗಳನ್ನು ಹೊಂದಿದೆ. ಸುಮಾರು 20 ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸೇವೆ ಸಲ್ಲಿಸಲಾಗಿದೆ ಎಂದರು.

ಯೋಜನೆಯ ಕಛೇರಿ 2004 ರಲ್ಲಿ ಪ್ರಾರಂಭಿಸಲಾಗಿದ್ದು, ಸುಮಾರು 16 ವರ್ಷಗಳ ಕಾಲ ಬಂಟ್ವಾಳದಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ನಿರ್ಮಾಣಗೊಂಡ ನೂತನ ಕಟ್ಟಡಕ್ಕೆ ಯೋಜನೆಯ ಜಿಲ್ಲಾ ಕಛೇರಿಯನ್ನು ತರಲಾಗುತ್ತಿದ್ದು, ಜುಲೈ 9 ರಂದು ಅಧಿಕೃತವಾಗಿ ಕಾರ್ಯಾರಂಭ ಮಾಡಲಾಗುತ್ತಿದೆ ಎಂದ ಅವರು ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಯೋಜನೆಯ ವತಿಯಿಂದ ಜಿಲ್ಲೆಯ ಅತೀ ದುರ್ಬಲವನ್ನು ಗುರುತಿಸಿ ಸುಮಾರು 2000 ಜನರಿಗೆ ಆಹಾರ ಕಿಟ್ ವಿತರಿಸಲಾಗಿದೆ ಎಂದರು.

ಸಂಸ್ಥೆಯ ವತಿಯಿಂದ ಸದಸ್ಯರಿಗೆ ಒಟ್ಟು 88 ಕೋಟಿ ರೂಪಾಯಿ ಸಾಲ ನೀಡಲಾಗಿದ್ದು, 950 ಔಟ್ ಸ್ಟ್ಯಾಂಡಿಂಗ್ ಮೊತ್ತ ಇದ್ದು, 130 ಕೋಟಿ ಸಂಘದ ಸದಸ್ಯರ ಒಟ್ಟು ಉಳಿತಾಯ ಎಂದರು. ಅಲ್ಲದೆ ಯೋಜನೆಯ ವತಿಯಿಂದ ಕೃಷಿ ಮತ್ತು ಕೃಷಿಯೇತರ ತರಬೇತಿಗಳು, ಕೃಷಿ ಅಧ್ಯಯನ ಪ್ರವಾಸಗಳು, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮಗಳು, ತಾಂತ್ರಿಕ ಮಾಹಿತಿ ಕಾರ್ಯಕ್ರಮ, ಸಂಪೂರ್ಣ ಸುರಕ್ಷಾ ಕಾರ್ಯಕ್ರಮಗಳು, ಸಮುದಾಯ ಅಭಿವೃದ್ದಿ ಕಾರ್ಯಕ್ರಮಗಳು, ನಿರಂತರ ಪ್ರಗತಿ ಪತ್ರಿಕೆ ಮೂಲಕ 35 ಸಾವಿರಕ್ಕೂ ಅಧಿಕ ಚಂದಾದಾರರನ್ನು ಹೊಂದಲಾಗಿದೆ. ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಮದ್ಯವರ್ಜನಾ ಶಿಬಿರಗಳನ್ನು ನಡೆಸಲಾಗಿದೆ. ಸುಜ್ಞಾನ ನಿಧಿ ಕಾರ್ಯಕ್ರಮದ ಮೂಲಕ 1531 ವಿದ್ಯಾರ್ಥಿಗಳಿಗೆ 71 ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗಿದೆ. ಸುಮಾರು 775 ಮಂದಿ ನಿರ್ಗತಿಕರಿಗೆ 51 ಲಕ್ಷಕ್ಕೂ ಮಿಕ್ಕಿದ ಮಾಸಾಶನ ನೀಡಲಾಗಿದೆ. ಹಸಿರು ಇಂಧನಾ ಕಾರ್ಯಕ್ರಮದ ಮೂಲಕ ಸೋಲಾರ್, ಕುಕ್ ಸ್ಟೌವ್, ಗೋಬರ್ ಗ್ಯಾಸ್ ಘಟಕ ಮೊದಲಾದವುಗಳನ್ನು ವಿತರಿಸಲಾಗಿದೆ. ಜೀವನ ಮಧುರ, ಮೈಕ್ರೋ ಬಚತ್ ಸ್ಕೀಂ ವಿಮಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಧಾರ್ಮಿಕ ಪೂಜಾ ಕಾರ್ಯಕ್ರಮಗಳು, ಪರಿಸರ ಕಾರ್ಯಕ್ರಮಗಳು, ಕೃಷಿ ಚಟುವಟಿಕೆಗಳಿಗೆ ಅನುದಾನ ವಿತರಣೆ, ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ, ಆಹಾರ ಕಿಟ್ ವಿತರಣೆ, ಭಿನ್ನ ಚೇತನ ವ್ಯಕ್ತಿಗಳಿಗೆ ವಿವಿಧ ಸಲಕರಣೆಗಳನ್ನು ವಿತರಿಸುವ ಮೂಲಕ ಸ್ಪಂದಿಸಲಾಗಿದೆ ಎಂದವರು ಸುದ್ದಿಗಾರರಿಗೆ ವಿವರಿಸಿದರು. ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.









  • Blogger Comments
  • Facebook Comments

0 comments:

Post a Comment

Item Reviewed: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಕಛೇರಿ ಬಂಟ್ವಾಳಕ್ಕೆ : ಸತೀಶ್ ಶೆಟ್ಟಿ Rating: 5 Reviewed By: karavali Times
Scroll to Top