ಮೆಲ್ಕಾರಿನಲ್ಲಿ ವ್ಯಕ್ತಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ : ಸಾರ್ವಜನಿಕರಿಂದ ತರಾಟೆ - Karavali Times ಮೆಲ್ಕಾರಿನಲ್ಲಿ ವ್ಯಕ್ತಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ : ಸಾರ್ವಜನಿಕರಿಂದ ತರಾಟೆ - Karavali Times

728x90

9 July 2020

ಮೆಲ್ಕಾರಿನಲ್ಲಿ ವ್ಯಕ್ತಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ : ಸಾರ್ವಜನಿಕರಿಂದ ತರಾಟೆ





ಪೊಲೀಸರ ಮೇಲೆ ಹಲ್ಲೆ, ನಾಲ್ವರು ಸಿಬ್ಬಂದಿ ಗಾಯಗೊಂಡು ಆಸ್ಪತ್ರೆಗೆ : ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ


ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಮೆಲ್ಕಾರ್ ಜಂಕ್ಷನ್ನಿನಲ್ಲಿ ಕಲ್ಲಡ್ಕ ನಿವಾಸಿ ಸಲಾಂ (32) ಎಂಬವರ ಮೇಲೆ ಗುರುವಾ ರಾತ್ರಿ ರಸ್ತೆಯಲ್ಲೇ ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿ ದೌರ್ಜನ್ಯ ಎಸಗಿದ ಬಗ್ಗೆ ಆರೋಪ ಕೇಳಿ ಬಂದಿದೆ.

ರಾತ್ರಿ ಸುಮಾರು 10.15 ರ ವೇಳೆಗೆ ಮೆಲ್ಕಾರ್ ಜಂಕ್ಷನ್ನಿನಲ್ಲಿ ಸುಮಾರು ಆರೇಳು ಮಂದಿ ಸಮವಸ್ತ್ರಧಾರಿ ಪೊಲೀಸರು ಸಲಾಂ ಮೇಲೆ ಲಾಠಿ ಹಿಡಿದು ಹಿಗ್ಗಾಮುಗ್ಗಾ ಪ್ರಹಾರ ನಡೆಸಿದ್ದಾರೆ ಎನ್ನಲಾಗಿದೆ. ಲಾಠಿ ಏಟಿನಿಂದ ಸಲಾಂ ಅವರ ತಲೆ, ಮುಖ, ಕೈ, ಕಾಲು, ಎದೆ ಮೊದಲಾದ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಈ ಸಂದರ್ಭ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ದೌರ್ಜನ್ಯ ನಡೆಸಿದ ಪೊಲೀಸರನ್ನು ತೀವ್ರ ತರಾಟೆಗೆಳೆದಿದ್ದು, ವ್ಯಕ್ತಿ ತಪ್ಪು ಏನಾದರೂ ಮಾಡಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೇ ಹೊರತು ರಸ್ತೆಯಲ್ಲೇ ದೌರ್ಜನ್ಯ ಎಸಗಿರುವುದು ಸರಿಯಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಬಗ್ಗೆ ವೀಡಿಯೋ  ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಸಲಾಂ ಲಾರಿ ಚಾಲಕ ವೃತ್ತಿ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

ಪೊಲೀಸರ ಮೇಲೆ ಹಲ್ಲೆ : ಎಸ್ಸೈ ಅವಿನಾಶ್ ಪ್ರತಿಕ್ರಿಯೆ


ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಬ‌ಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ಅವರು ಸಲಾಂ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ದೊರೆತಿಲ್ಲ.









  • Blogger Comments
  • Facebook Comments

0 comments:

Post a Comment

Item Reviewed: ಮೆಲ್ಕಾರಿನಲ್ಲಿ ವ್ಯಕ್ತಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ : ಸಾರ್ವಜನಿಕರಿಂದ ತರಾಟೆ Rating: 5 Reviewed By: karavali Times
Scroll to Top