ಆಧಾರ್-ಪಾನ್ ಜೋಡಣೆ ಅವಧಿ ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೂ ವಿಸ್ತರಣೆ - Karavali Times ಆಧಾರ್-ಪಾನ್ ಜೋಡಣೆ ಅವಧಿ ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೂ ವಿಸ್ತರಣೆ - Karavali Times

728x90

6 July 2020

ಆಧಾರ್-ಪಾನ್ ಜೋಡಣೆ ಅವಧಿ ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೂ ವಿಸ್ತರಣೆ



ನವದೆಹಲಿ (ಕರಾವಳಿ ಟೈಮ್ಸ್) : ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್‌ಗೆ ಜೋಡಣೆ ಮಾಡುವ ಅಂತಿಮ ದಿನಾಂಕವನ್ನು  ಮುಂದಿನ ವರ್ಷದ ಮಾರ್ಚ್ 31ರವರೆಗೂ ಸರ್ಕಾರ ವಿಸ್ತರಿಸಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ಗೆ ಜೋಡಣೆ ಮಾಡುವ ಗಡುವನ್ನು ಮುಂದಿನ ವರ್ಷದ ಮಾರ್ಚ್ 31ರವರೆಗೂ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮೊದಲು 1 ಲಕ್ಷದವರೆಗೂ ತೆರಿಗೆ ಬಾಧ್ಯತೆ ಇದ್ದಲ್ಲಿ ನವೆಂಬರ್ 30, 2020ರವರೆಗೂ ಗಡುವನ್ನು ಆದಾಯ ತೆರಿಗೆ ಇಲಾಖೆ ವಿಸ್ತರಿಸಿತ್ತು.









  • Blogger Comments
  • Facebook Comments

0 comments:

Post a Comment

Item Reviewed: ಆಧಾರ್-ಪಾನ್ ಜೋಡಣೆ ಅವಧಿ ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೂ ವಿಸ್ತರಣೆ Rating: 5 Reviewed By: karavali Times
Scroll to Top