ಮಂಗಳೂರು (ಕರಾವಳಿ ಟೈಮ್ಸ್) : ಕೋರೋನಾ ವೈರಸ್ ನಿಗ್ರಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಂಪೂರ್ಣ ವೈಫಲ್ಯವನ್ನು ಖಂಡಿಸಿ, ಸಿಪಿಐಎಂ ನೇತೃತ್ವದಲ್ಲಿ ದ.ಕ. ಜಿಲ್ಲೆಯಾದ್ಯಂತ ವಾರಾಚರಣೆಯ ಭಾಗವಾಗಿ ಬಜಾಲ್-ಪಕ್ಕಲಡ್ಕದಲ್ಲಿ ಬಿತ್ತಿಚಿತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಸಿಪಿಐಎಂ ನಗರ ಸಮಿತಿ ಸದಸ್ಯ ಸುರೇಶ್ ಬಜಾಲ್ ಮಾತನಾಡಿದರು. ಡಿವೈಎಫ್‍ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಖಂಡರಾದ ಲೋಕೇಶ್ ಎಂ., ವರಪ್ರಸಾದ್, ಅಶೋಕ್ ಸಾಲ್ಯಾನ್, ಧೀರಜ್ ಪಕ್ಕಲಡ್ಕ, ರಿತೇಶ್ ಬಜಾಲ್, ಆನಂದ, ದೀಪಕ್ ಬೊಲ್ಲ, ಯಶ್‍ರಾಜ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment