2020-21 ಶೈಕ್ಷಣಿಕ ವರ್ಷದಲ್ಲಿ 179 ವೃತ್ತಿಪರ ತಾಂತ್ರಿಕ ಕಾಲೇಜುಗಳು ಬಂದ್, 9 ವರ್ಷಗಳಲ್ಲೇ ಇದು ದಾಖಲೆ - Karavali Times 2020-21 ಶೈಕ್ಷಣಿಕ ವರ್ಷದಲ್ಲಿ 179 ವೃತ್ತಿಪರ ತಾಂತ್ರಿಕ ಕಾಲೇಜುಗಳು ಬಂದ್, 9 ವರ್ಷಗಳಲ್ಲೇ ಇದು ದಾಖಲೆ - Karavali Times

728x90

28 July 2020

2020-21 ಶೈಕ್ಷಣಿಕ ವರ್ಷದಲ್ಲಿ 179 ವೃತ್ತಿಪರ ತಾಂತ್ರಿಕ ಕಾಲೇಜುಗಳು ಬಂದ್, 9 ವರ್ಷಗಳಲ್ಲೇ ಇದು ದಾಖಲೆ



ನವದೆಹಲಿ (ಕರಾವಳಿ ಟೈಮ್ಸ್) : 2020-21 ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟಾರೆ 179 ವೃತ್ತಿಪರ ತಾಂತ್ರಿಕ ಶಿಕ್ಷಣ ನೀಡುವ ಕಾಲೇಜುಗಳು ಮುಚ್ಚಲ್ಪಟ್ಟಿದ್ದು 9 ವರ್ಷಗಳಲ್ಲಿ ಇದು ದಾಖಲೆಯ ಪ್ರಮಾಣವಾಗಿದೆ. ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್‍ಗಳು, ಬ್ಯುಸಿನೆಸ್ ಸ್ಕೂಲ್‍ಗಳು ಸೇರಿದಂತೆ ತಾಂತ್ರಿಕ ಸಂಸ್ಥೆಗಳು ಕಳೆದ 9 ವರ್ಷಗಳಲ್ಲೇ ಅತಿ ಹೆಚ್ಚು ಮುಚ್ಚಲ್ಪಟ್ಟಿವೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅಂಕಿ-ಅಂಶ ಬಿಡುಗಡೆ ಮಾಡಿದೆ. 

179 ಸಂಸ್ಥೆಗಳ ಹೊರತಾಗಿ, ಕಳೆದ 5 ವರ್ಷಗಳಿಂದ ಹೆಚ್ಚಿನ ಸಂಖ್ಯೆಯ ಸೀಟ್‍ಗಳು ಖಾಲಿ ಇರುವುದರಿಂದ 134 ಸಂಸ್ಥೆಗಳು ತಾಂತ್ರಿಕ ಪರಿಷತ್‍ನಿಂದ ಅನುಮತಿಯನ್ನು ಪಡೆಯಲಿಲ್ಲ. ಅದು ಕಾರಣ ಅವುಗಳೂ ಸಹ ಮುಚ್ಚಿವೆ ಎಂದು ಎಐಸಿಟಿಇ ಹೇಳಿದೆ. 

ಇನ್ನು 44 ಸಂಸ್ಥೆಗಳು ಪರಿಷತ್‍ನಿಂದ ಅನುಮೋದನೆ ಪಡೆಯಲಿಲ್ಲ ಅಥವಾ ಅರ್ಜಿಗಳನ್ನು ಹಿಂಪಡೆದಿವೆ. 

2019-20 ರಲ್ಲಿ 92 ತಾಂತ್ರಿಕ ಇನ್ಸ್ಟಿಟ್ಯೂಟ್‍ಗಳು ಮುಚ್ಚಿದ್ದವು 2018-19 ರಲ್ಲಿ 89, 2017-18 ರಲ್ಲಿ 134. 2016-17 ರಲ್ಲಿ 163 2015-16 ರಲ್ಲಿ 126 2014-15 ರಲ್ಲಿ 77 ತಾಂತ್ರಿಕ ಸಂಸ್ಥೆಗಳು ಮುಚ್ಚಿದ್ದವು.


Add caption

Add caption





  • Blogger Comments
  • Facebook Comments

0 comments:

Post a Comment

Item Reviewed: 2020-21 ಶೈಕ್ಷಣಿಕ ವರ್ಷದಲ್ಲಿ 179 ವೃತ್ತಿಪರ ತಾಂತ್ರಿಕ ಕಾಲೇಜುಗಳು ಬಂದ್, 9 ವರ್ಷಗಳಲ್ಲೇ ಇದು ದಾಖಲೆ Rating: 5 Reviewed By: karavali Times
Scroll to Top