ಮಂಗಳೂರು (ಕರಾವಳಿ ಟೈಮ್ಸ್) : ಪ್ರಸಕ್ತ ವಿದ್ಯಾಮಾನದಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಮುಕ್ಕ ಶ್ರೀನಿವಾಸ ವಿಶ್ವ ವಿದ್ಯಾಲಯ ಅಭಿಯಾoತ್ರಿಕ ಮತ್ತು ತಾoತ್ರಿಕ ಮಹಾವಿದ್ಯಾಲಯ ವತಿಯಿಂದ ಅಣಕು ಸಿಇಟಿ ಪರೀಕ್ಷೆ ಜುಲೈ 24 ಹಾಗೂ 25 ರಂದು ಏರ್ಪಡಿಸಲಾಗಿದೆ. ಸಿಇಟಿ ಪರೀಕ್ಷೆ ಎದುರಿಸುವ ಮಾಹಿತಿ ಮಾತ್ರವಲ್ಲದೇ ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶುಲ್ಕ ರಿಯಾಯಿತಿಗಳನ್ನು ಕೊಡಲಾಗುವುದು ಎಂದು ಕಾಲೇಜು ಪ್ರಾಂಶುಪಾಲ ಡಾ. ಥಾಮಸ್ ಪಿಂಟೋ ತಿಳಿಸಿದ್ದಾರೆ.
ಅಣುಕು ಸಿಇಟಿ ಪರೀಕ್ಷೆ ಗಳು ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಗಣಿತಶಾಸ್ತ್ರ ವಿಷಯಗಳಲ್ಲಿ ನಡೆಸಲಾಗುತ್ತದೆ. ಪ್ರತಿಯೊಂದು ವಿಷಯದಲ್ಲಿ 70 ನಿಮಿಷಗಳ ಪರೀಕ್ಷೆ ಇದ್ದು, ಜುಲೈ 24 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ಅವಧಿಯಲ್ಲಿ ಭೌತಶಾಸ್ತ್ರ ಮತ್ತು ಮದ್ಯಾಹ್ನ 2.00-5.00ರ ಅವಧಿಯಲ್ಲಿ ರಸಾಯನ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಜುಲೈ 25 ರಂದು ಬೆಳ್ಳಿಗ್ಗೆ 9.00-1.00ರ ಅವಧಿಯಲ್ಲಿ ಗಣಿತಶಾಸ್ತ್ರ ಪರೀಕ್ಷೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಲಾಕ್‌ಡೌನ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಈ ಅಣಕು ಪರೀಕ್ಷೆಯ ಉಪಯೋಗವನ್ನು ಪಡೆದು ಇದೇ ತಿಂಗಳಅಂತ್ಯದದಲ್ಲಿ ನಡೆಯುವ ಸಿಇಟಿ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಹುದಾಗಿದೆ. ಪ್ರಶ್ನೆ ಪತ್ರಿಕೆಗಳ ಕ್ಲಿಷ್ಟತೆಯನ್ನು ಅರಿಯುವುದರ ಜೊತೆಗೆ ತಯಾರಿಕಾ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯಕವಾಗಲಿದೆ. ಈ ಅಣಕು ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿ ಗಳಿಗೆ ಆಕರ್ಷಕ ರೀತಿಯಲ್ಲಿ ವಿದ್ಯಾರ್ಥಿವೇತನ ಹಾಗೂ ಶುಲ್ಕ ರಿಯಾಯಿತಿಯನ್ನು ಕೊಡಲಾಗುತ್ತದೆ ಎಂದವರು ಮಾಹಿತಿ ನೀಡಿದ್ದಾರೆ.
ಶ್ರೀನಿವಾಸ್ ವಿಶ್ವವಿದ್ಯಾಲಯದ ವತಿಯಿಂದ ಒಟ್ಟು 820 ವಿದ್ಯಾರ್ಥಿವೇತನಗಳನ್ನು ಒದಗಿಸಲಾಗುತ್ತದೆ.
ಆನ್ ಲೈನ್ ಅಣಕು ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಚಿಸುವ ಪಿಯುಸಿ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಪ್ರೊ. ವಿಶ್ವಾಸ್ ಶೆಟ್ಟಿ (9743289292), ಅಥವಾ ಡಾ. ಪ್ರವೀಣ್ ಬಿ ಎಂ (9980951074) ಇವರನ್ನು ಸಂಪರ್ಕಿಸಬಹುದಾಗಿದೆ ಅಥವಾ vishwas.cet@srinivasuniversity.edu.in ಇಮೇಲ್ ಸಂಪರ್ಕಿಸಬಹುದು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
0 comments:
Post a Comment