ನೈಟ್ ಕಫ್ರ್ಯೂ ಹಾಗೂ ಸಂಡೇ ಲಾಕ್ ಡೌನ್ ಮುಂದುವರಿಕೆ
ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯಾದ್ಯಂತ ಬುಧವಾರದ ಬಳಿಕ ಲಾಕ್‍ಡೌನ್ ತೆರವಾಗುವುದಲ್ಲದೆ ರಾತ್ರಿ ಕರ್ಪ್ಯೂ ಅವಧಿಯನ್ನು ಕಡಿಮೆ ಮಾಡಿ ಸರಕಾರ ಆದೇಶಿಸಿದೆ. ಮಂಗಳವಾರ ರಾತ್ರಿ ಹೊಸ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿದ್ದು, ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವೆರೆಗೆ ನೈಟ್ ಕರ್ಫ್ಯೂ ಇರಲಿದೆ. ಈ ಮೊದಲು ಇದು ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಇತ್ತು. ಅದೇ ರೀತಿ ಭಾನುವಾರದ ಕಫ್ರ್ಯು ಕೂಡಾ ಮುಂದುವರೆಯಲಿದೆ.
ಅನ್‍ಲಾಕ್ 2 ರ ಮಾರ್ಗಸೂಚಿಗಳ ಪೈಕಿ ಕೆಲ ಅಂಶಗಳನ್ನು ಬದಲಾವಣೆಗೊಳಿಸಲಾಗಿದೆ. ಈ ಮೊದಲಿನಂತೆ ಭಾನುವಾರದ ಕರ್ಫ್ಯೂ ಮುಂದುವರಿಯಲಿದೆ. ಅಂಗಡಿ ಮುಂಗಟ್ಟುಗಳು ಬೆಳಗ್ಗೆ 5 ರಿಂದ ರಾತ್ರಿ 9ರವರೆಗೆ ತೆರೆಯಬಹುದು. ಜನಸಂದಣಿಯನ್ನು ತಡೆಗಟ್ಟಲು ಬೆಂಗಳೂರು ಸೇರಿ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿರುವ ತರಕಾರಿ ಮಾರುಕಟ್ಟೆಗಳು ಎಪಿಎಂಸಿಗಳಿಗೆ ಅಥವಾ ವಿಶಾಲ ಜಾಗಗಳಿಗೆ ಸ್ಥಳಾಂತರ ಮಾಡಬೇಕು. ಪಾರ್ಕ್‍ಗಳಲ್ಲಿ ವಾಕ್ ಮಾಡಬಹುದು. ಆದರೆ ಕಲ್ಲಿನ ಬೆಂಚ್‍ಗಳ ಮೇಲೆ ಕುಳಿತುಕೊಳ್ಳುವಂತಿಲ್ಲ. ಜಿಮ್ ಸಲಕರಣೆಗಳನ್ನು ಬಳಸಿ ವ್ಯಾಯಾಮ ಮಾಡುವಂತಿಲ್ಲ. ಕಂಟೈನ್ಮೆಂಟ್ ವಲಯಗಳಲ್ಲಿ ಎಲ್ಲ ಚಟುವಟಿಕೆಗಳಿಗೂ ನಿರ್ಬಂಧ ಮುಂದುವರಿಸಲಾಗಿದೆ. ಜುಲೈ 31ರವರೆಗೆ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ.
0 comments:
Post a Comment