ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಸರಕಾರ ಕ್ರಮ ಕೈಗೊಳ್ಳಬೇಕು : ಇಕ್ಬಾಲ್ - Karavali Times ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಸರಕಾರ ಕ್ರಮ ಕೈಗೊಳ್ಳಬೇಕು : ಇಕ್ಬಾಲ್ - Karavali Times

728x90

1 July 2020

ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಸರಕಾರ ಕ್ರಮ ಕೈಗೊಳ್ಳಬೇಕು : ಇಕ್ಬಾಲ್



ಕೈ ಮೀರಿ ಹೋಗುತ್ತಿರುವ ಕೊರೋನಾ ವೈರಸ್ ನಿಯಂತ್ರಣಕ್ಕೆ ಉಪಕ್ರಮ ಅಗತ್ಯ  


ಬಂಟ್ವಾಳ (ಕರಾವಳಿ ಟೈಮ್ಸ್) : ಜಾಗತಿಕ ಮಹಾಮಾರಿ ಕೊರೋನಾ ಸಾಮುದಾಯಿಕ ಹರಡುವಿಕೆಯ ಮೊದಲ ಹಂತ ಈಗಾಗಲೇ ತಲುಪಿದೆ. ಇನ್ನು ಮುಂದೆ ಕೊರೋನಾ ರೋಗವು ಯಾರಿಗೆ ಎಲ್ಲಿಂದ ಹೇಗೆ ಬಂದಿದೆ ಎಂದು ತಿಳಿದುಕೊಳ್ಳಲು ಸಾಧ್ಯವೇ ಇಲ್ಲದಷ್ಟು ಪರಿಸ್ಥಿತಿ ಬಿಗಡಾಯಿಸಿದೆ ಎಂದು  ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಇಕ್ಬಾಲ್ ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ  ಮತ್ತು ಕೇಂದ್ರ ಸರಕಾರ ತನ್ನ ಎಲ್ಲಾ ಉನ್ನತ ಮಟ್ಟದ ಪ್ರಯತ್ನಗಳನ್ನು ಮಾಡುತ್ತಿದ್ದರೂ ಯಾವುದೂ ಪರಿಣಾಮಕಾರಿ ಬೆಳವಣಿಗೆ ಕಾಣುತ್ತಿಲ್ಲ. ಆಸ್ಪತ್ರೆಗಳು ಬೆಡ್, ವೆಂಟಿಲೇಟರ್, ಪಿಪಿಇ ಕಿಟ್‍ಗಳ ಕೊರತೆಯಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಇಂತಹ ಕಠಿಣ ಕಷ್ಟದ ಸಮಯದಲ್ಲಿ ನಮ್ಮ ಸೇವೆ ಮಾಡಬೇಕಾದ ಪೆÇಲೀಸರು, ದಾದಿಯರು ಹಾಗೂ ಅನೇಕ ವೈದ್ಯರುಗಳು ಕೂಡ ಕೊರೋನಾ ಮಾಹಾಮಾರಿಯ ಹೊಡೆತಕ್ಕೆ ಸಿಲುಕಿರುವುದು ದೊಡ್ಡ ಆಘಾತಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಸರಕಾರದ ಮುಂದೆ ಇನ್ನೊಂದು ಸಲ ಲಾಕ್‍ಡೌನ್ ಮಾಡುವ ಯೋಚನೆ ಇದ್ದರೆ ಅದನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಬೇಕಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಸರಕಾರ ಬೇರೆ ಬೇರೆ ಇಲಾಖೆಗಳಿಗೆ ಅಭಿವೃದ್ಧಿ ಹೆಸರಲ್ಲಿ ಬಿಡುಗಡೆ ಮಾಡುತ್ತಿರುವ ನಿಧಿಯನ್ನು ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಸ್ಥಗಿತಗೊಳಿಸಿ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕಿದೆ. ಆ ಮೂಲಕ ರಾಜ್ಯದ ಪ್ರತಿಯೊಬ್ಬ ಪ್ರಜೆಗಳ ಕೊರೋನಾ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿ ಪಾಸಿಟಿವ್ ಬಂದವರನ್ನು ಸಾಮಾನ್ಯ ನಾಗರಿಕರಿಂದ ಪ್ರತ್ಯೇಕಿಸಿ ನಂತರ ಲಾಕ್‍ಡೌನ್ ಮಾಡಿದರೆ ಒಂದು ಹಂತದವರೆಗೆ ಕೊರೋನಾವನ್ನು ತಡೆಗಟ್ಟಬಹುದು ಎಂದ ಇಕ್ಬಾಲ್ ತಪ್ಪಿದಲ್ಲಿ ಈ ಹಿಂದೆ ಮಾಡಿರುವ ಲಾಕ್‍ಡೌನ್‍ನಂತೆ ಸರಕಾರದ ಮುಂದಿನ ಕ್ರಮವೂ ವಿಫಲವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.











  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಸರಕಾರ ಕ್ರಮ ಕೈಗೊಳ್ಳಬೇಕು : ಇಕ್ಬಾಲ್ Rating: 5 Reviewed By: karavali Times
Scroll to Top