ಝೂಮ್ ಆಪ್‍ನಲ್ಲಿ ನಡೆಯುವ ಸಂಕಿರಣ ಫೇಸ್ ಬುಕ್ ಹಾಗೂ ಯೂ ಟ್ಯೂಬ್‍ನಲ್ಲಿ ನೇರ ಪ್ರಸಾರ
ಮಂಗಳೂರು (ಕರಾವಳಿ ಟೈಮ್ಸ್) : ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯ ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮೇಶನ್ ಸೈನ್ಸ್ ವಿಭಾಗದ ವತಿಯಿಂದ ಆಗಸ್ಟ್ 1 ರಂದು ಕಂಪ್ಯುಟೇಶನ್ ಫಿಸಿಕ್ಸ್ ಇನ್ ಎಮರ್ಜಿಂಗ್ ಟೆಕ್ನಾಲಜೀಸ್ ಎಂಬ ಅಂತರಾಷ್ಟ್ರೀಯ ವಿಚಾರ ಸಂಕಿರಣ ಝೂಮ್ ಆಪ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಅದರ ನೇರ ಪ್ರಸಾರ ಫೇಸ್ ಬುಕ್ ಹಾಗೂ ಯೂಟ್ಯೂಬ್‍ನಲ್ಲಿ ನಡೆಯಲಿದೆ.
ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಭಾಷಣಗಾರ ಘಾನದ ಅಕ್ರಾ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ನಾನ ಯಾವ್ ಅಸಬೇರ್, ರೊಮ್ಯಾನಿಯಾ ಯೂನಿವರ್ಸಿಟಿ ಆಫ್ ಕ್ರೊವಾದ ಡಾ. ಆಡ್ರೀನಾಬುರ್ಲೆ, ಇಸ್ರೆಲ್ ಬಾರ್ಲಾನ್ ವಿಶ್ವವಿದ್ಯಾಲಯದ ಡಾ. ಅರೂಪ್ ಚಕ್ರಬೂರ್ತಿ, ನವದೆಹಲಿಯ ಕೃಷಿ ಹಾಗೂ ರೈತರ ಕಲ್ಯಾಣಾಭಿವೃದ್ಧಿ ಸಚಿವಾಲಯ ಐಸಿಎಆರ್-ಡಿಎಆರ್‍ಇ ಇದರ ಪಿಯೂಷ್ ಮಿಶ್ರಾ, ಚೆನ್ನೈ ಎಚ್‍ಸಿಎಲ್ ಟೆಕ್ನಾಲಜಿಸ್ ಇದರ ಟಿ ಸೆಂತಿಲ್ ಕುಮಾರ್, ನೋಯ್ಡಾ ದಶಾರ್ದ ವಿಶ್ವವಿದ್ಯಾಲಯದ ಡಾ. ಸುದೇಶ್ನಾಚಾಕ್ರೋಬಾರ್ಡಿ ವಿಷಯ ಮಂಡಿಸಲಿದ್ದಾರೆ.
ವಿಚಾರ ಸಂಕಿರಣವನ್ನು ಝೂಮ್ ಆಪ್‍ನಲ್ಲಿ ಆಯೋಜಿಸಲಿದ್ದು, ಯೂಟ್ಯೂಬ್ ಹಾಗೂ ಫೇಸ್‍ಬುಕ್‍ನಲ್ಲಿ ನೇರ ಪ್ರಸಾರ ಮಾಡಲಾಗುವುದು. 100ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ದೇಶ ವಿದೇಶದ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಕರಿಂದ ಸ್ವೀಕರಿಸಲಾಗಿದೆ. ಜೊತೆಗೆ ಈ ಸಂಕಿರಣದಲ್ಲಿ ಭಾಗವಹಿಸುವ ಆಸಕ್ತರು ನೋಂದಣಿ ಲಿಂಕ್, ಐಡಿ ಪಾಸ್‍ವರ್ಡ್ ಪಡೆಯಲು 9482199882ಗೆ ಸಂಪರ್ಕಿಸಬಹುದು ಎಂದು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಸ್. ಐತಾಳ್, ಸಿಸಿಐಎಸ್‍ನ ಡೀನ್ ಪ್ರೊ. ಶ್ರೀಧರ ಆಚಾರ್ಯ, ವಿಚಾರ ಸಂಕಿರಣದ ಸಂಯೋಜಕರಾದ ಡಾ. ಎ. ಜಯಂತಿ ದೇವಿ, ಡಾ. ಕೃಷ್ಣ ಪ್ರಸಾದ್ ಕೆ. ಅವರುಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment