ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಸಂಧಿಗ್ದತೆಯ ನಡುವೆ ರಾಜ್ಯದಲ್ಲಿ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗೂ ಇಬ್ಬರು ಅಧಿಕಾರಿಗಳನ್ನು ಬಿಬಿಎಂಪಿ ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಜಕುಮಾರ್ ಕತ್ರಿ, ನಾಗಾಂಬಿಕ ದೇವಿ, ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಸೇರಿ 12 ಹಿರಿಯ ಐಎಎಸ್ ಅಧಿಕಾರಿಗಳಿಗೆ ಸರ್ಕಾರ ಮಂಗಳವಾರ ವಿವಿಧ ಜವಾಬ್ದಾರಿ ನೀಡಿ ಸ್ಥಳನಿಯುಕ್ತಿಗೊಳಿಸಿದೆ.
ರಾಜಕುಮಾರ್ ಕತ್ರಿ – ಕಾರ್ವಿುಕ ಇಲಾಖೆ (ಸಮ ಪ್ರಭಾರ), ಎಂ.ನಾಗಾಂಬಿಕ ದೇವಿ ಸಮಾಜ ಕಲ್ಯಾಣ ಇಲಾಖೆ ( ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಮಪ್ರಭಾರ), ಮನೋಜ್ ಜೈನ್- ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ), ಪಿ.ರಾಜೇಂದ್ರ ಚೋಳನ್ -ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು ಮತ್ತು ಐಟಿ), ಆರ್ ವಿನೋತ್ ಪ್ರಿಯ –ನಿರ್ದೇಶಕರು, ಸಣ್ಣ ಮತ್ತು ಮಧ್ಯಮ ಉದ್ಯಮ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಬಿ ಆರ್ ಮಮತಾ- ಹೆಚ್ಚುವರಿ ಯೋಜನಾ ನಿರ್ದೇಶಕರು ಸಕಾಲ ಮಿಷನ್, ಸಿಂಧೂ ಬಿ
ರೂಪೇಶ್ -ನಿರ್ದೇಶಕರು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸ್ (ಡಿಪಿಎಆರ್), ಪೊಮ್ಮಲ ಸುನಿಲ್ ಕುಮಾರ್ -ವಿಜಯಪುರ ಜಿಲ್ಲಾಧಿಕಾರಿ, ಕೆ.ವಿ.ರಾಜೇಂದ್ರ -ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಎಚ್.ವಿ. ದರ್ಶನ್ -ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ, ಎಚ್.ಎನ್.ಗೋಪಾಲ ಕೃಷ್ಣ – ಎಂ.ಡಿ. ಮೖಸೂರು ಸಕ್ಕರೆ ಕಂಪನಿ , ಎಸ್.ಎಂ.ಕವಿತಾ ಎಸ್. ಮಣ್ಣಿಕೇರಿ- ಚಿತ್ರದುರ್ಗ ಜಿಲ್ಲಾಧಿಕಾರಿ, ಪಾಟೀಲ್ ಯಲ ಗೌಡ ಶಿವನಗೌಡ – ಜಂಟಿ ನಿರ್ದೇಶಕ, ಆಡಳಿತ ತರಬೇತಿ ಸಂಸ್ಥೆ , ಮೈಸೂರು.
0 comments:
Post a Comment