ಚೆನ್ನರಾಯಪಟ್ಟಣ ಠಾಣಾ ಪಿಎಸ್ಸೈ ಆತ್ಮಹತ್ಯೆಗೆ ಶರಣು : ಕೊಲೆ ಪ್ರಕರಣದ ಕಾನೂನು ಪ್ರಕ್ರಿಯೆ ಮುಗಿಸಿ ಮನೆಗೆ ತೆರಳಿದ ಅಧಿಕಾರಿಯ ಸಾವಿನ ಬಗ್ಗೆ ಸಂಶಯ - Karavali Times ಚೆನ್ನರಾಯಪಟ್ಟಣ ಠಾಣಾ ಪಿಎಸ್ಸೈ ಆತ್ಮಹತ್ಯೆಗೆ ಶರಣು : ಕೊಲೆ ಪ್ರಕರಣದ ಕಾನೂನು ಪ್ರಕ್ರಿಯೆ ಮುಗಿಸಿ ಮನೆಗೆ ತೆರಳಿದ ಅಧಿಕಾರಿಯ ಸಾವಿನ ಬಗ್ಗೆ ಸಂಶಯ - Karavali Times

728x90

31 July 2020

ಚೆನ್ನರಾಯಪಟ್ಟಣ ಠಾಣಾ ಪಿಎಸ್ಸೈ ಆತ್ಮಹತ್ಯೆಗೆ ಶರಣು : ಕೊಲೆ ಪ್ರಕರಣದ ಕಾನೂನು ಪ್ರಕ್ರಿಯೆ ಮುಗಿಸಿ ಮನೆಗೆ ತೆರಳಿದ ಅಧಿಕಾರಿಯ ಸಾವಿನ ಬಗ್ಗೆ ಸಂಶಯ



ಹಾಸನ (ಕರಾವಳಿ ಟೈಮ್ಸ್) :
ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ಠಾಣಾ ಪಿಎಸ್ಸೈ ಕಿರಣ್ ಕುಮಾರ್ ತಮ್ಮ ನಿವಾಸದಲ್ಲಿ ಹಠಾತ್ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಜುಲೈ 30 ರ ರಾತ್ರಿವರೆಗೂ ಕರ್ತವ್ಯದಲ್ಲಿದ್ದ ಕಿರಣ್ ಕುಮಾರ್ ಕೊಲೆ ಆರೋಪಿಯೊಬ್ಬನ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಶುಕ್ರವಾರ (ಜುಲೈ 31) ಬೆಳಿಗ್ಗೆ ಪ್ರಕರಣದ ಕುರಿತ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.

    ಬಳಿಕ ಅವರು ಮನೆಯಲ್ಲಿ ಹಠಾತ್ ಆಗಿ ಆತ್ಮಹತ್ಯೆಗೆ ಶರಣಾಗಿದ್ದು, ಘಟನೆಗೆ ಸ್ಪಷ್ಟ ಕಾರಣ ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ. ಮೃತ ಪೊಲೀಸ್ ಅಧಿಕಾರಿಯ ಮೃತದೇಹ ಚನ್ನರಾಯಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.

    ಚೆನ್ನರಾಯಪಟ್ಟಣದಲ್ಲಿ ಎರಡು ದಿನಗಳಲ್ಲಿ ಎರಡು ಕೊಲೆಗಳು ನಡೆದಿದೆ. ಈ ಕೊಲೆಗಳ ತನಿಖಾ ತಂಡದಲ್ಲಿ ಕಿರಣ್ ಕುಮಾರ್ ಸಹ ಇದ್ದರು. ಘಟನಾ ಸ್ಥಳಕ್ಕೆ ಎಎಸ್ಪಿ ನಂದಿನಿ, ಡಿವೈಎಸ್ಪಿ ಮೊದಲಾದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.











  • Blogger Comments
  • Facebook Comments

0 comments:

Post a Comment

Item Reviewed: ಚೆನ್ನರಾಯಪಟ್ಟಣ ಠಾಣಾ ಪಿಎಸ್ಸೈ ಆತ್ಮಹತ್ಯೆಗೆ ಶರಣು : ಕೊಲೆ ಪ್ರಕರಣದ ಕಾನೂನು ಪ್ರಕ್ರಿಯೆ ಮುಗಿಸಿ ಮನೆಗೆ ತೆರಳಿದ ಅಧಿಕಾರಿಯ ಸಾವಿನ ಬಗ್ಗೆ ಸಂಶಯ Rating: 5 Reviewed By: karavali Times
Scroll to Top