ಮಂಗಳೂರು (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಕೊರೊನಾ ಹೆಸರಿನಲ್ಲಿ 2 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದ ಆರೋಪ ಮಾಡಿರುವ ಬಗ್ಗೆ ನೀಡಲಾಗಿರುವ ಲೀಗಲ್ ನೋಟಿಸ್ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸರಕಾರದ ಎಲ್ಲ ನೋಟೀಸಿಗೂ ಉತ್ತರ ನೀಡಲು ಸಿದ್ಧರಿದ್ದೇವೆ. ಹಗರಣ ನಡೆದಿದೆ ಅನ್ನೋದಕ್ಕೆ ಎಲ್ಲ ದಾಖಲೆಗಳಿವೆ. ಈ ಹಗರಣದ ತನಿಖೆಯನ್ನು ನ್ಯಾಯಾಧೀಶರು ವಿಚಾರಣೆ ಮಾಡಬೇಕು. ಎಲ್ಲಾ ಖರೀದಿ ಪ್ರಕ್ರಿಯೆ ಬಗ್ಗೆಯೂ ತನಿಖೆಯಾಗಲಿ. ನಾನು ಏನು ಮಾಡಿದ್ದೇನೆ ಎಂಬುವುದರ ಬಗ್ಗೆಯೂ ತನಿಖೆಯಾಗಲಿ. ನನ್ನ ಮೇಲೆ ಇಡಿ, ಸಿಒಡಿ, ಸಿಬಿಐ ತನಿಖೆ ಮಾಡಿದರು. ನಾನು ಹೇಳಿದ್ದು ತಪ್ಪಾಗಿದ್ದರೆ ಸರಕಾರ ನನ್ನನ್ನು ಗಲ್ಲಿಗೇರಿಸಲಿ ಎಂದು ಸವಾಲು ಹಾಕಿದ್ದಾರೆ.
ಸರಕಾರ ನನಗೆ ಲೀಗಲ್ ನೋಟಿಸ್ ಕಳಿಸಿದೆ. ನಾನು ಅದಕ್ಕೆ ಸರಿಯಾದ ಉತ್ತರ ಕೊಡುತ್ತೇನೆ. ನಮ್ಮಲ್ಲಿ ಬೇಕಾದ ಎಲ್ಲ ದಾಖಲೆಗಳೂ ಇವೆ ಎಂದಿದ್ದಾರೆ.
0 comments:
Post a Comment