ನವದೆಹಲಿ (ಕರಾವಳಿ ಟೈಮ್ಸ್) : ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಭಾರತ ರಷ್ಯಾವನ್ನು ಹಿಂದಕ್ಕೆ ತಳ್ಳಿ, ವಿಶ್ವದಲ್ಲಿ ಅತೀ ಹೆಚ್ಚು ಸೋಂಕಿತ ರಾಷ್ಟ್ರಗಳ ಪೈಕಿ 3ನೇ ಸ್ಥಾನಕ್ಕೇರಿದೆ.
ಆರೋಗ್ಯ ಸಚಿವಾಲಯದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಇಂದು ಕೊರೋನಾ ಸೋಂಕಿತರ ಸಂಖ್ಯೆ 6,85,110 ಕ್ಕೇರಿಕೆಯಾಗಿದ್ದು, ರಷ್ಯಾಗಿಂತಲೂ 1989 ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದೆ.
ಜಾಗತಿಕ ಮಟ್ಟದಲ್ಲಿ ಅಮೆರಿಕಾದಲ್ಲಿ ಈವರೆಗೆ 29,36,904 ಪ್ರಕರಣಗಳು ದಾಖಲಾಗುವ ಮೂಲಕ ಮೊದಲ ಸ್ಥಾನದಲ್ಲಿದೆ. ಬ್ರೆಜಿಲ್ 15,78,376 ಪ್ರಕರಣಗಳ ಮೂಲಕ ದ್ವಿತೀಯ ಸ್ಥಾನದಲ್ಲಿದೆ.
ಪ್ರಸ್ತುತ ದೇಶದಲ್ಲಿ 19,441 ಜನ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 4,16,011 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
0 comments:
Post a Comment