ಬಂಟ್ವಾಳ (ಕರಾವಳಿ ಟೈಮ್ಸ್) : ರಾಜ್ಯ ಬಿಜೆಪಿ ಸಕಾ೯ರವು ಮಾಲೀಕರ ಲಾಭಿಗೆ ಮಣಿದು ಕಾಮಿ೯ಕರಿಗೆ ನ್ಯಾಯ ಸಮ್ಮತವಾಗಿ 1.4.2020 ರಿಂದ ಸಿಗಬೇಕಿದ್ದ ವ್ಯತ್ಯಸ್ಥ ತುಟ್ಟಿ ಭತ್ಯೆಯನ್ನು (ವಿಡಿಎ) ಒಂದು ವಷ೯ ಮುಂದೂಡಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬಂಟ್ವಾಳ ತಾಲೂಕು ಸಮಿತಿ ಖಂಡಿಸಿವೆ.
ಕೋವಿಡ್ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾಮಿ೯ಕರಿಗೆ ಪರಿಹಾರವನ್ನು ಒದಗಿಸುವ ಮತ್ತು ಲಾಕ್ ಡೌನ್ ಕಾಲಾವಧಿಯ ವೇತನ ಕೊಡಿಸಲು ಕ್ರಮ ವಹಿಸಿಬೇಕಾಗಿದ್ದ ರಾಜ್ಯ ಸಕಾ೯ರವು ಇದೀಗ ಕಾಮಿ೯ಕರಿಗೆ ಕನಿಷ್ಠ ವೇತನ ಕಾಯ್ದೆ ಅನುಸಾರ ಸಿಗಬೇಕಿರುವ ವಿಡಿಎ ಯನ್ನು ಒಂದು ವಷ೯ ಮುಂದೂಡಿ ರಾಜ್ಯದ ಕಾಮಿ೯ಕರಿಗೆ ದ್ರೋಹ ಎಸೆಗಿದೆ ಎಂದು ಪಕ್ಷ ಆರೋಪಿಸಿದೆ.
ಬಿಜೆಪಿಯ ಕಾಪೋ೯ರೇಟ್ ಬಂಡವಾಳ ಪರ ನೀತಿಗಳನ್ನು ಕೋವಿಡ್ ನೆಪದಲ್ಲಿ ಜಾರಿಗೆ ತರುವ ಭಾಗವಾಗಿ ಇಂತಹ ಕಾಮಿ೯ಕ ವಿರೋಧಿ ಕ್ರಮವನ್ನು ಜಾರಿಗೆ ತರುತ್ತಿದೆ ಎಂದು ಸಿಪಿಐ (ಎಂ) ಖಂಡಿಸಿದೆ. ಮಾಸಿಕ ರೂ. 417.60 ರಂತೆ ರಾಜ್ಯದ ಪ್ರತಿ ಕಾಮಿ೯ಕರಿಗೆ ಮುಂದಿನ 12 ತಿಂಗಳ ಕಾಲ ಸಿಗಬೇಕಿದ್ದ ಒಟ್ಟು ರೂ. 417.60 + 68.90 + 34.79 = 521.29 X 12 = 6255.43 ರೂಪಾಯಿಗಳನ್ನು ಮಾಲಿಕರಿಗೆ ಉಡುಗೊರೆಯಾಗಿ ಕಾಮಿ೯ಕರನ್ನು ದೋಚಿ ನೀಡುತ್ತಿದೆ. (ಕನಿಷ್ಠ ವೇತನ + ಪಿಎಫ್ & ಇಎಸ್ಐ + ಬೋನಸ್ = ರೂ.521.29). ರಾಜ್ಯದಲ್ಲಿರುವ 35 ಲಕ್ಷ ಇಪಿಎಫ್ ಉಳ್ಳ ಕಾಮಿ೯ಕರಿಗೆ ಇದರಿಂದಾಗಿ ರೂ. 6255.44 X 35 ಲಕ್ಷ = 2189.40 ಕೋಟಿ ರೂಪಾಯಿಗಳ ಒಟ್ಟು ನಷ್ಟವಾಗಲಿದೆ. ರಾಜ್ಯದ ಆಥಿ೯ಕ ಪುನಶ್ಚೇತನಕ್ಕೆ ಕಾಮಿ೯ಕರ ಮೂಲಕ ಮಾರುಕಟ್ಟೆಗೆ ಬರಬೇಕಿದ್ದ ಇಷ್ಟು ಹಣ ಮಾಲೀಕರ ಖಜಾನೆ ಸೇರಲಿದೆ. ಮಾಲೀಕರಿಗೆ 2189 ಕೋಟಿ ರೂಪಾಯಿಗಳನ್ನು ದೋಚಲು ಬಿಜೆಪಿ ಸಕಾ೯ರ ಅನುವು ಮಾಡಿಕೊಟ್ಟಿದೆ ಎಂದು ಸಿಪಿಐ(ಎಂ) ಖಂಡಿಸಿದೆ.
ರಾಜ್ಯದ 80 ಶೇಕಡ ಕಾಮಿ೯ಕರಿಗೆ ಮಾಲೀಕರು ಲಾಕ್ ಡೌನ್ ಕಾಲಾವಧಿಯ ವೇತನ ನೀಡಿಲ್ಲ. 70 ಶೇಕಡ ಕಾಮಿ೯ಕರನ್ನು ಕೆಲಸದಿಂದ ತೆಗೆದಿರುವ ಮಾಲೀಕರಿಗೆ ಇಂತಹ ಉಡುಗೊರೆ ನೀಡಿರುವ ಬಿಜೆಪಿ ಸಕಾ೯ರ ಎಷ್ಟು ಕಿಕ್ ಬ್ಯಾಕ್ ಪಡೆದಿರಬಹುದು ಎಂದು ರಾಜ್ಯದ ಜನತೆ ಅರಿಯಬೇಕಿದೆ. ಲಾಕ್ ಡೌನ್ ಕಾಲಾವಧಿಯ ವೇತನ ನೀಡದ ಮಾಲೀಕರ ಮೇಲೆ ಕ್ರಮಕ್ಕೆ ಹೊರಡಿಸಿದ್ದ 13.4.2020 ರ ಆದೇಶವನ್ನು ಒಂದು ದಿನದಲ್ಲೇ 15.4.2020 ರಂದು ಹಿಂಪಡೆದಿದ್ದ ಬಿಜೆಪಿ ಸಕಾ೯ರ 12.6.2020 ರ ಸುಪ್ರಿಂ ಕೋರ್ಟ್ ತೀಪಿ೯ನಂತೆ ಲಾಕ್ ಡೌನ್ ಕಾಲಾವಧಿಯ ಪೂಣ೯ ವೇತನ ಪಡೆಯಲು ಮಾಲೀಕರು ಕಾಮಿ೯ಕ ಸಂಘಗಳ ನಡುವಿನ ಮಾತುಕತೆಗೆ ನಿಯಮಗಳನ್ನು ಇದುವರೆಗೆ ರೂಪಿಸಿಲ್ಲ. ಆದರೆ ಮಾಲೀಕರಿಗೆ ರಿಯಾಯಿತಿ ನೀಡುತ್ತಿದೆ. ಈಗಾಗಲೇ ನಿಗದಿತ ಕಾಲಾವಧಿಯ ಕಾಮಿ೯ಕರ ನೇಮಕಕ್ಕೆ ಕಾನೂನು ತಿದ್ದುಪಡಿ ಮಾಡಿ ಕಾಯಂ ಕಾಮಿ೯ಕರನ್ನು ಇಲ್ಲದಾಗಿಸಲು ಕ್ರಮವಹಿಸಿ ಮಾಲೀಕರಿಗೆ ಲಾಭ ಮಾಡಿಕೊಟ್ಟಿದ್ದ ಬಿಜೆಪಿ ಸಕಾ೯ರವು ಇದೀಗ ಇಂತಹ 2189 ಕೋಟಿ ರೂಪಾಯಿಗಳ ಕೊಡುಗೆ ನೀಡಿದೆ ಎಂದು ಸಿಪಿಐ(ಎಂ) ಖಂಡಿಸಿದೆ. ಕೂಡಲೇ ಆದೇಶ ಹಿಂಪಡೆಯಬೇಕೆಂದು ರಾಜ್ಯ ಸಕಾ೯ರವನ್ನು ಸಿಪಿಐ(ಎಂ) ಬಂಟ್ವಾಳ ತಾಲೂಕು ಸಮಿತಿ ಆಗ್ರಹಿಸುತ್ತದೆ ಎಂದು ಸಿಪಿಐ(ಎಂ) ಬಂಟ್ವಾಳ ತಾಲೂಕು ಸಮಿತಿ ಕಾರ್ಯದರ್ಶಿ ರಾಮಣ್ಣ ವಿಟ್ಲ ತಿಳಿಸಿದ್ದಾರೆ.
0 comments:
Post a Comment