ಜುಲೈ 21-22 ರಂದು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಿಂದ ಸಿಇಟಿ ಆನ್‍ಲೈನ್ ಅಣುಕು ಪರೀಕ್ಷೆ - Karavali Times ಜುಲೈ 21-22 ರಂದು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಿಂದ ಸಿಇಟಿ ಆನ್‍ಲೈನ್ ಅಣುಕು ಪರೀಕ್ಷೆ - Karavali Times

728x90

20 July 2020

ಜುಲೈ 21-22 ರಂದು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಿಂದ ಸಿಇಟಿ ಆನ್‍ಲೈನ್ ಅಣುಕು ಪರೀಕ್ಷೆ



ಮಂಗಳೂರು (ಕರಾವಳಿ ಟೈಮ್ಸ್) : ಪಿಯುಸಿ ವಿದ್ಯಾರ್ಥಿಗಳು ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಸಿಇಟಿ ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಎಂಬ ಮಾಹಿತಿಯನ್ನು ಆನ್ಲೈನ್‍ನಲ್ಲಿ ಸಿಇಟಿ ಅಣುಕು ಪರೀಕ್ಷೆಯನ್ನು ಬರೆಯುವ ವಿಶೇಷ ಅವಕಾಶವನ್ನು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತಿದೆ.

    ಈ ನಿಟ್ಟಿನಲ್ಲಿ ಇಂದು ಮತ್ತು ನಾಳೆ (ಜುಲೈ 21 ಮತ್ತು 22ರಂದು) ಕರ್ನಾಟಕ ಸಿಇಟಿ ಆನ್‍ಲೈನ್ ಅಣುಕು ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಯಲ್ಲಿ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ 70 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಯುತ್ತದೆ. ವಿದ್ಯಾರ್ಥಿಗಳು ಇಂದು (ಜುಲೈ 21) ಪೂರ್ವಾಹ್ನ 9 ರಿಂದ 1 ಗಂಟೆಯವರೆಗೆ ಭೌತಶಾಸ್ತ್ರ, ಅಪರಾಹ್ನ 2 ರಿಂದ ಗಂಟೆಯವರೆಗೆ ರಸಾಯನಶಾಸ್ತ್ರ, ಹಾಗೂ ನಾಳೆ (ಜುಲೈ 22) ಪೂರ್ವಾಹ್ನ 9 ರಿಂದ 1 ಗಂಟೆಯವರೆಗೆ ಗಣಿತ, ಅಪರಾಹ್ನ 2 ರಿಂದ 5 ಗಂಟೆಯವರೆಗೆ ಜೀವಶಾಸ್ತ್ರ ವಿಷಯಗಳಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆ.

    ಸಿಇಟಿ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಈ ಅಣುಕು ಪರೀಕ್ಷೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವುದಲ್ಲದೇ, ಪರೀಕ್ಷಾ ಪ್ರಶ್ನೆ ಪತ್ರಿಕೆಯ ವಿಶಿಷ್ಠತೆ ಹಾಗೂ ಕ್ಲಿಷ್ಟತೆಯ ಮಟ್ಟವನ್ನು ತಿಳಿದುಕೊಂಡು, ತಮ್ಮ ತಮ್ಮ ಕಲಿಕಾ ತಯಾರಿ ಮಟ್ಟವನ್ನು ವಿಶ್ಲೇಷಿಸಿ, ತಾವು ನಡೆಸುವ ಕಲಿಕೆಯಲ್ಲಿ ಯಾವ ಬದಲಾವಣೆಯನ್ನು ಮಾಡಿಕೊಂಡು ಅಭ್ಯಾಸ ಮಾಡಬಹುದೆಂದು ತಿಳಿದುಕೊಂಡು ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಉತ್ತಮ ಅವಕಾಶ ಇದಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಡಾ ಶ್ರೀನಿವಾಸ ಮಯ್ಯ ತಿಳಿಸಿದ್ದಾರೆ.

    ಪಿಯುಸಿ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಪರೀಕ್ಷೆ ಬರೆಯಲು ಸಮಯಕ್ಕೆ ಸರಿಯಾಗಿ https://sitmng.ac.in/Mock-Test ಗೆ ಭೇಟಿ ನೀಡಿ ಪರೀಕ್ಷೆ ಬರೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಶ್ರೀ ಧೀರಜ್ ಹೆಬ್ರಿ ಇವರನ್ನು 8147766270 ರಲ್ಲಿ ಅಥವಾ dheeraj.h7@sitmng.ac.in ನ್ನು ಸಂಪರ್ಕಿಸಬಹುದು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಜುಲೈ 21-22 ರಂದು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಿಂದ ಸಿಇಟಿ ಆನ್‍ಲೈನ್ ಅಣುಕು ಪರೀಕ್ಷೆ Rating: 5 Reviewed By: karavali Times
Scroll to Top