ಬೆಳ್ತಂಗಡಿ (ಕರಾವಳಿ ಟೈಮ್ಸ್) : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಮೂಲಕ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಶನಿವಾರ ಜೈನ್ ಪೇಟೆ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವಾಹನ ಕಳ್ಳತನದ ಆರೋಪಿಗಳಾದ ಮಂಗಳೂರು ತಾಲೂಕು ಸುರತ್ಕಲ್ ನಿವಾಸಿ ವಿಜಯ ಯಾನೆ ಆಂಜನೇಯ (23), ಬಂಟ್ವಾಳ ತಾಲೂಕು ಉಳಾಯಿಬೆಟ್ಟು ನಿವಾಸಿ ಪ್ರದೀಪ್ ಅಲಿಯಾಸ್ ಚೇತನ್ ಅಲಿಯಾಸ್ ಪ್ರದಿ (27), ಬಂಟ್ವಾಳ ತಾಲೂಕು, ಬಾಳೆಪುಣಿ ಗ್ರಾಮದ ಪೂಪಾಡಿಕಲ್ಲು ನಿವಾಸಿ ಸುದೀಶ್ ಕೆ.ಕೆ. ಅಲಿಯಸ್ ಮುನ್ನ (20) ಬೆಳ್ತಂಗಡಿ ತಾಲೂಕು, ಲಾಯಿಲ ಗ್ರಾಮದ ಕುಂಟಿನಿ ಎಂಬಲ್ಲಿನ ನಿವಾಸಿಗಳಾದ ಮೋಹನ ಅಲಿಯಸ್ ಪುಟ್ಟ (21) ಹಾಗೂ ನಿತಿನ್ ಕುಮಾರ್ (22) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ 4 ಬೈಕ್, ಕಳವಿಗೆ ಬಳಸಿದ ಓಮ್ನಿ ಕಾರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು 3.60 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ಆರೋಪಿಗಳನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 comments:
Post a Comment