ಬೆಂಗಳೂರು (ಕರಾವಳಿ ಟೈಮ್ಸ್) : ಕೋವಿಡ್ ಸಂಬಂಧ ವಿವಿಧ ಇಲಾಖೆಗಳಿಂದ ಖರ್ಚು ಮಾಡಿದ್ದೇ ಕೇವಲ 2,118 ಕೋಟಿ ರೂಪಾಯಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರುಗಳು ಹಗರಣ ಆರೋಪ ನಡೆಸಿದ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಕೋವಿಡ್ ಸಂಬಂಧ ಒಟ್ಟು 4,167 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ ಎಲ್ಲಾ ಇಲಾಖೆಗಳಿಗೆ 506 ಕೋಟಿ ರೂಪಾಯಿ ಕೋವಿಡ್ ನಿಯಂತ್ರಣ ಸಂಬಂಧ ಬಿಡುಗಡೆ ಮಾಡಲಾಗಿದೆ. ಬಾಧಿತರ ಪರಿಹಾರ ಕ್ರಮಗಳಿಗೆ 1611.7 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ಒಟ್ಟು 2,118 ಕೋಟಿ ರೂಪಾಯಿ ಮಾತ್ರ ಖರ್ಚಾಗಿದೆ ಎಂದರು. ನೀಡಿದರು.
ವೈದ್ಯಕೀಯ ಸಲಕರಣೆ ಖರೀದಿಗಾಗಿ ಆರೋಗ್ಯ ಇಲಾಖೆ 366.70 ಕೋಟಿ ರೂಪಾಯಿ, ವೈದ್ಯಕೀಯ ಶಿಕ್ಷಣ 33 ಕೋಟಿ ರೂಪಾಯಿ, ಎಲ್ಲಾ ಡಿಸಿಗಳಿಗೆ 68.02 ಕೋಟಿ ರೂಪಾಯಿ, ಡಿಸ್ಟ್ರಿಕ್ಟ್ ಮಿನರಲ್ ಫಂಡ್ ಗೆ 23.97 ಕೋಟಿ ರೂಪಾಯಿ, ಕಾರ್ಮಿಕ ಇಲಾಖೆಗೆ 4.25 ಕೋಟಿ ರೂಪಾಯಿ, ಗೃಹ ಇಲಾಖೆಗೆ 5.62 ಕೋಟಿ ರೂಪಾಯಿ, ಕಾರಾಗೃಹ ಇಲಾಖೆಗೆ 1.05 ಕೋಟಿ ರೂಪಾಯಿ, ಸಾರಿಗೆ ಇಲಾಖೆಗೆ 2.36 ಕೋಟಿ ರೂಪಾಯಿ, ಬಿಬಿಎಂಪಿಗೆ 86 ಲಕ್ಷ ರೂಪಾಯಿ, ಸಮಾಜ ಕಲ್ಯಾಣ ಇಲಾಖೆಗೆ 65 ಲಕ್ಷ ರೂಪಾಯಿ ಸೇರಿ ಒಟ್ಟು 506 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದವರು ವಿವರಿಸಿದರು.
0 comments:
Post a Comment