ಸದ್ಯ ಬೀಟಾ ಅವೃತ್ತಿಯ ಬಳಕೆದಾರರಿಗೆ ಮಾತ್ರ ಈ ಅವಕಾಶ
ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೂ ಸಿಗಲಿದೆ ಈ ಅವಕಾಶ
ಕ್ಯಾಲಿಫೋರ್ನಿಯಾ (ಕರಾವಳಿ ಟೈಮ್ಸ್) : ಒಂದೇ ವಾಟ್ಸಪ್ ನಂಬರನ್ನು ಇನ್ನು ಮುಂದೆ 4 ಡಿವೈಸ್‍ಗಳಲ್ಲಿ ಬಳಸಬಹುದು. ಅಂತಹ ತಂತ್ರಜ್ಞಾನವನ್ನು ಫೇಸ್ ಬುಕ್ ಮಾಲಕತ್ವದ ವಾಟ್ಸಪ್ ಅಭಿವೃದ್ದಿಪಡಿಸಿದೆ. ಇದುವರೆಗೆ ವಾಟ್ಸಪ್ ನಂಬರ್ ಒಂದು ಫೋನಿಗೆ ಮಾತ್ರ ಬಳಕೆಗೆ ಸೀಮಿತವಾಗಿತ್ತು. ಆದರೆ ಇನ್ನು ಮುಂದೆ ಆ ಖಾತೆಯನ್ನು 4 ಸಾಧನಗಳಲ್ಲಿ ಬಳಸುವಂತೆ ಅಪ್‍ಡೇಟ್ ಮಾಡಲು ವಾಟ್ಸಪ್ ಮುಂದಾಗಿದೆ.
4 ಡಿವೈಸ್‍ಗಳಿಗೆ ಸಪೋರ್ಟ್ ಮಾಡುವ ಸಂಬಂಧ ವಾಟ್ಸಪ್ ಹಲವು ದಿನಗಳಿಂದ ಕಾರ್ಯಪ್ರವೃತ್ತವಾಗಿದ್ದು, ಇದೀಗ ಅದು ಲಭ್ಯವಾಗಿದೆ ಎನ್ನಲಾಗಿದೆ. ಅಧಿಕೃತ ಪ್ರಕಟಣೆಯಷ್ಟೆ ಬಾಕಿ ಇದೆ ಎನ್ನಲಾಗುತ್ತಿದೆ. ಈಗ ವಾಟ್ಸಪ್ ಬೀಟಾ ಆವೃತ್ತಿ ಅಪ್ಲಿಕೇಶನ್ ಬಳಸುವ ಮಂದಿಗೆ ಈ ವಿಶೇಷತೆ ಲಭ್ಯವಾಗಿದೆ. ಬೀಟಾ ಅವೃತ್ತಿಯನ್ನು ಬಳಸುವ ಎಲ್ಲರಿಗೆ ಇದು ಲಭ್ಯವಾಗಿಲ್ಲ. ಆಯ್ದ ಕೆಲ ಬಳಕೆದಾರರಿಗೆ ಈ ವಿಶೇಷತೆ ಲಭ್ಯವಾಗಿದೆ.
ವಾಟ್ಸಪ್ ಮುಖಪುಟದ ಬಲ ತುದಿಯಲ್ಲಿರುವ ಮೂರು ಚುಕ್ಕೆಗಳನ್ನು (ಮೆನು ಬಟನ್) ಒತ್ತಿದಾಗ ‘Linked Device’ ಕಾಣುತ್ತದೆ. ಇಲ್ಲಿ ಆಯ್ಕೆ ಮಾಡಿಕೊಂಡು ಈ ವಿಶೇಷತೆಯನ್ನು ಬಳಕೆದಾರರು ಬಳಸಬಹುದಾಗಿದೆ. ಬಳಕೆದಾರು ಡೆಸ್ಕ್‍ಟಾಪ್ ಆವೃತ್ತಿಯ ವಾಟ್ಸಪ್ ವೆಬ್ ಮೂಲಕ 4 ಸಾಧನಗಳನ್ನು ಬಳಸಬಹುದಾಗಿದೆ.
ಈಗಾಗಲೇ ಕೆಲ ಮೆಸೇಜಿಂಗ್ ಅಪ್ಲಿಕೇಶನ್‍ಗಳಲ್ಲಿ ಡೆಸ್ಕ್ ಟಾಪ್/ ಲ್ಯಾಪ್‍ಟಾಪ್ ಮೂಲಕ 4ಕ್ಕಿಂತ ಹೆಚ್ಚು ಸಾಧನಗಳನ್ನು ಕನೆಕ್ಟ್ ಮಾಡಲು ಸಾಧ್ಯವಿದೆ. ಡೆಸ್ಟ್‍ಟಾಪ್ ಅವೃತ್ತಿ ಓಪನ್ ಮಾಡಿ ಫೋನ್ ನಂಬರ್ ಒತ್ತಿದಾಗ ಒಂದು ಒಟಿಪಿ (ಒನ್ ಟೈಂ ಪಾಸ್‍ವರ್ಡ್) ಬರುತ್ತದೆ. ಈ ಒಟಿಪಿಯನ್ನು ನಮೂದಿಸಿದಾಗ ಡೆಸ್ಕ್ ಟಾಪಿನಲ್ಲೂ ಆ ಅಪ್ಲಿಕೇಶನ್ ಬಳಸಬಹುದು.
ಈಗ ವಾಟ್ಸಪ್ ವೆಬ್ ಮೂಲಕ ಡೆಸ್ಕ್ ಟಾಪ್‍ನಲ್ಲಿ ವಾಟ್ಸಪ್ ಓಪನ್ ಮಾಡಬಹುದಾಗಿದೆ. ಹೀಗಾಗಿ ಈಗ ಕ್ಯೂಆರ್ ಕೋಡ್‍ಗಳನ್ನು ಸ್ಕ್ಯಾನ್ ಮಾಡಿದಂತೆ ಓಪನ್ ಮಾಡಬೇಕಾಗುತ್ತದೋ ಅಥವಾ ಒಟಿಪಿ ಮೂಲಕ ನಾಲ್ಕು ಸಾಧನಗಳು ಕನೆಕ್ಟ್ ಆಗುತ್ತದೋ ಎನ್ನುವುದು ತಿಳಿದು ಬಂದಿಲ್ಲ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾದಾಗ ಈ ಎಲ್ಲ ವಿಚಾರಗಳು ಸ್ಪಷ್ಟವಾಗಲಿದೆ.
Add caption |
0 comments:
Post a Comment