ವಿಟ್ಲ (ಕರಾವಳಿ ಟೈಮ್ಸ್) : ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಹಾಗೂ ಪ್ರಾದೇಶಿಕ ರಕ್ತಪೂರಣ ಕೇಂದ್ರ ವೆನ್ಲಾಕ್ ಆಸ್ಪತ್ರೆ ಮಂಗಳೂರು ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಭಾನುವಾರ ನಡೆಯಿತು.
ಗಿಡಕ್ಕೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಎಂ.ಎನ್. ಮಾತನಾಡಿ ರಕ್ತ ದಾನ ಮಾಡುವುದರ ಮೂಲಕ ಜನತೆ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ವಿಟ್ಲ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಡಾ. ವೇದಾವತಿ, ಡಾ. ವಿಶ್ವೇಶ್ವರ ಭಟ್, ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಮಾರ್ಗದರ್ಶಕ ಮುಹಮ್ಮದ್ ಇಕ್ಬಾಲ್ ಹಳೆಮನೆ, ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಸಾಮಾಜಿಕ ಕಾರ್ಯಕರ್ತ ರಾಜಾ ಚೆಂಡ್ತಿಮಾರ್, ನ್ಯಾಯವಾದಿ ತುಳಸೀದಾಸ್ ವಿಟ್ಲ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮಂಗಳೂರು ಇದರ ಮುಖ್ಯಸ್ಥ ಮಹೇಶ್, ಪ್ರಮುಖರಾದ ವಿ.ಕೆ.ಎಂ. ಹಂಝ ಮೇಗಿನಪೇಟೆ, ನಿಸಾರ್ ವಿ.ಎಚ್., ಸಾದಿಕ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಅತೀ ಹೆಚ್ಚು ರಕ್ತದಾನ ಮಾಡಿದ ಮಹಮ್ಮದ್ ಇಕ್ಬಾಲ್ ಹಳೆಮನೆ, ಇಕ್ಬಾಲ್ ಕೋಲ್ಪೆ, ಇರ್ಪಾನ್ ಒಕ್ಕೆತ್ತೂರು ಅವರನ್ನು ಜಿಲ್ಲಾ ಏಡ್ಸ್ ನಿಯಂತ್ರಣ ಪ್ರಾಧಿಕಾರದಿಂದ ಸನ್ಮಾನಿಸಲಾಯಿತು. ಡಿ. ಗ್ರೂಪ್ ವಿಟ್ಲ ಇದರ ಅಂಬ್ಯುಲೆನ್ಸ್ ಚಾಲಕರಾದ ಉಬೈದ್ ಮತ್ತು ಶುಹೈಬ್ ಅವರನ್ನು ಡಿ.ವೈ.ಎಫ್.ಐ ವತಿಯಿಂದ ಸನ್ಮಾನಿಸಲಾಯಿತು.
ಡಿ.ವೈ.ಎಫ್.ಐ. ವಿಟ್ಲ ವಲಯ ಸಮಿತಿ ಅಧ್ಯಕ್ಷ ನುಜುಂ ಅಳಿಕೆ, ಕಾರ್ಯದರ್ಶಿ ಜಮೀಲ್ ಎಂ., ಕೋಶಾಧಿಕಾರಿ ಆರೀಫ್ ಬಿ.ಕೆ., ಪ್ರಮುಖರಾದ ಸಪ್ವಾನ್, ತಮೀಮ್, ರಾಘವೇಂದ್ರ, ಶೌಕತ್ ಆಲಿ ಖಾನ್, ಸಲ್ಮಾನ್ ವಿ., ಶಹೀದ್ ಶೈನ್ ಮೊದಲಾದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
0 comments:
Post a Comment