ಉಪ್ಪಿನಂಗಡಿ (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯದಿಂದ ಆತೂರು ಕ್ಲಸ್ಟರ್ ಸಮಿತಿಯ ಸಂದರ್ಶನ ಸಭೆ, ಕೊರೋನಾ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ವಿಖಾಯ ಕಾರ್ಯಕರ್ತರು ಮೆಡಿಚೈನ್ ಮಾಡಿದ ಸ್ವಯಂ ಸೇವಕರಿಗೆ ಸನ್ಮಾನ ಹಾಗೂ ಪ್ರಮಾಣ ಪತ್ರ ವಿತರಣೆ ಮತ್ತು ಇತ್ತೀಚಿಗೆ ನಿಧನರಾದ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಸ್ವಾದಿಕ್ ಮುಸ್ಲಿಯಾರ್, ಎಸ್.ವೈ.ಎಸ್.ನ ಮೆಟ್ರೋ ಮುಹಮ್ಮದ್ ಹಾಜಿ, ವಿಖಾಯ ಕಾರ್ಯಕರ್ತ ಮುಬಾರಕ್ ಇವರ ಹೆಸರಿನಲ್ಲಿ ತಹಲೀಲ್ ಸಮರ್ಪಣಾ ಕಾರ್ಯಕ್ರಮ ಇತ್ತೀಚೆಗೆ ಇಲ್ಲಿನ ಬದ್ರಿಯಾ ಹಾಲ್‍ನಲ್ಲಿ ನಡೆಯಿತು.
ಹಂಝ ಸಖಾಫಿ ದುಆ ನೆರವೇರಿಸಿದರು. ಅಬ್ದುಲ್ ರಝಕ್ ದಾರಿಮಿ ಹಳೆನೇರಂಕಿ ಉದ್ಘಾಟಿಸಿದರು. ಕ್ಲಸ್ಟರ್ ಅಧ್ಯಕ್ಷ ಸಿದ್ದೀಕ್ ನೀರಾಜೆ ಅಧ್ಯಕ್ಷತೆ ವಹಿಸಿದರು. ವಲಯಾಧ್ಯಕ್ಷ ಅಶ್ರಫ್ ಫಾಝಿಲ್ ಬಾಖವಿ, ವಲಯ ಕಾರ್ಯದರ್ಶಿ ಹಾರಿಶ್ ಕೌಸರಿ ಮಾತನಾಡಿದರು.
ಬಶೀರ್ ಮುಸ್ಲಿಯಾರ್, ರಝಾಕ್ ಹಾಜಿ ಕುಂಡಾಜೆ, ಅಶ್ರಫ್ ಕೊರೆಪದವು ಹಾಗೂ ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತದ್ದರು.
ಎಸ್ಕೆಎಸ್ಸೆಸ್ಸೆಫ್ ವಿಖಾಯಾ ಮೆಡಿಚೈನ್ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ ಸಿದ್ದೀಕ್ ನೀರಾಜೆ, ಝಕಾರಿಯಾ ಮುಸ್ಲಿಯಾರ್ ಆತೂರು, ಮುಹಮ್ಮದ್ ಕುಂಡಾಜೆ ಹಾಗೂ ಅಬೂಬಕ್ಕರ್ ಸಿದ್ದೀಕ್ ಮುನೀರ್ ಆತೂರು ಇವರಿಗೆ ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನೀಡಿದ ಪ್ರಮಾಣ ಪತ್ರ ವಿತರಣೆ ಹಾಗೂ ಕ್ಲಸ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ರಾಝಿಕ್ ಆತೂರುಬೈಲ್ ಸ್ವಾಗತಿಸಿದರು. ಝಕಾರಿಯಾ ಮುಸ್ಲಿಯಾರ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment