ಶಾಲಾ-ಕಾಲೇಜುಗಳು ಜುಲೈ 31 ರವರೆಗೂ ಕ್ಲೋಸ್
ನವದೆಹಲಿ (ಕರಾವಳಿ ಟೈಮ್ಸ್) : ಅನ್ ಲಾಕ್-1ರ ಅವಧಿ ಜೂನ್ 30ಕ್ಕೆ ಕೊನೆಗೊಳ್ಳುತ್ತಿದ್ದು, ಇದೀಗ ಕೇಂದ್ರ ಸರಕಾರ ಅನ್‍ಲಾಕ್-2 ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆಗೊಳಿಸಿದೆ. ನೂತನ ಮಾರ್ಗಸೂಚಿಯಂತೆ ಜುಲೈ 31ರ ವರೆಗೆ ಶಾಲಾ, ಕಾಲೇಜು, ತರಬೇತಿ ಕೇಂದ್ರಗಳನ್ನು ತೆರೆಯುವಂತಿಲ್ಲ.
ಮೆಟ್ರೋ ರೈಲು, ಸಿನಿಮಾ ಥೀಯೇಟರ್, ಜಿಮ್ ಹಾಗೂ ಸ್ವಿಮ್ಮಿಂಗ್ ಫೂಲ್, ಮನೋರಂಜನಾ ಪಾರ್ಕ್, ಬಾರ್, ಸಭಾ ಭವನಗಳು ಹಾಗೂ ಹೆಚ್ಚು ಜನ ಸೇರುವ ಪ್ರದೇಶಗಳನ್ನು ತೆರೆಯುವಂತಿಲ್ಲ ಎಂದು ನೂತನ ಮಾರ್ಗಸೂಚಿ ತಿಳಿಸಿದೆ.
ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಯಾವುದೇ ಸಭೆ-ಸಮಾರಂಭಗಳನ್ನು ಆಯೋಜಿಸುವಂತಿಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯಯವಾಗಿ ಮಾಸ್ಕ್ ಧರಿಸುವುದು ಮತ್ತು 6 ಅಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ, ಅಂತ್ಯಕ್ರಿಯೆಗಳಲ್ಲಿ 20ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ವಿಧಿಸಲಾಗುವುದು, ವರ್ಕ್ ಫ್ರಂ ಹೋಮ್ ಗೆ ಮೊದಲ ಆದ್ಯತೆ ನೀಡುವುದು. ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕಂಪನಿಗಳು ನೋಡಿಕೊಳ್ಳತಕ್ಕದ್ದು, ಕೆಲಸದ ಸ್ಥಳ, ಮಾರುಕಟ್ಟೆ, ಮಾಲ್, ಧಾರ್ಮಿಕ ಕೇಂದ್ರಗಳ ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದು ಇವೇ ಮೊದಲಾದ ನಿಯಮಗಳು ಮಾರ್ಗ ಸೂಚಿಯಲ್ಲಿ ಒಳಗೊಂಡಿದೆ.
0 comments:
Post a Comment