ನವದೆಹಲಿ (ಕರಾವಳಿ ಟೈಮ್ಸ್) : ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಭಾರತದ ಇಬ್ಬರು ರಾಜತಾಂತ್ರಿಕ ಸಿಬ್ಬಂದಿಗಳು ದಿಢೀರ್ ನಾಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ಈ ಸಂಬಂಧ ಪಾಕಿಸ್ತಾನ ಅಧಿಕಾರಿಗಳೊಂದಿಗೆ ಭಾರತ ಸರಕಾರ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಹೈಕಮಿಷನ್ ಸಿಬ್ಬಂದಿ ಇಬ್ಬರೂ ಸಿಐಎಸ್‍ಎಫ್ ಚಾಲಕರಾಗಿದ್ದರು. ಈ ಇಬ್ಬರು ಇಸ್ಲಾಮಾಬಾದ್‍ನಲ್ಲಿ ಕರ್ತವ್ಯದಲ್ಲಿದ್ದರು ಎಂಬುದು ಬೆಳಕಿಗೆ ಬಂದಿದೆ. ಬೆಳಗ್ಗೆ ಮನೆಯಿಂದ ಹೊರಟ ಅವರು ಕಚೇರಿಗೆ ಬಂದಿಲ್ಲ. ಇದು ಸದ್ಯದ ಮಟ್ಟಿಗೆ ಆಂತಕಕ್ಕೀಡಾಗಿದೆ. ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಮಾಜಿ ರಾಜತಾಂತ್ರಿಕ ಶರತ್ ಸಬರ್ವಾಲ್ ಅವರು ನೀತಿ ಸಂಹಿತೆಯನ್ನು ಪಾಲಿಸದ ಕಾರಣ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
0 comments:
Post a Comment