ಊರವರ ಸಹಕಾರ ದೊರೆತಾಗ ಶಾಲೆಗಳು ಸುವ್ಯವಸ್ಥಿತವಾಗಿ ಬೆಳೆಯಲು ಸಾಧ್ಯ : ಶಾಸಕ ಖಾದರ್ - Karavali Times ಊರವರ ಸಹಕಾರ ದೊರೆತಾಗ ಶಾಲೆಗಳು ಸುವ್ಯವಸ್ಥಿತವಾಗಿ ಬೆಳೆಯಲು ಸಾಧ್ಯ : ಶಾಸಕ ಖಾದರ್ - Karavali Times

728x90

9 June 2020

ಊರವರ ಸಹಕಾರ ದೊರೆತಾಗ ಶಾಲೆಗಳು ಸುವ್ಯವಸ್ಥಿತವಾಗಿ ಬೆಳೆಯಲು ಸಾಧ್ಯ : ಶಾಸಕ ಖಾದರ್



ಬಂಟ್ವಾಳ (ಕರಾವಳಿ ಟೈಮ್ಸ್) : ಶಿಕ್ಷಕರಿಗೆ ಊರ ಸಾರ್ವಜನಿಕರು ಉತ್ತಮ ಸಹಕಾರ ನೀಡಿದಾಗ ಶಾಲೆಗಳು ಸುವ್ಯವಸ್ಥಿತವಾಗಿ ಬೆಳವಣಿಗೆ ಹೊಂದಲು ಸಾಧ್ಯ. ಊರಿನ ಶಾಲೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ ಊರಿನ ಪ್ರತಿಯೊಂದು ಮಗುವೂ ಸುಶಿಕ್ಷಿತರಾಗುವುದರಲ್ಲಿ ಸಂಶಯವಿಲ್ಲ ಎಂದು ಮಂಗಳೂರು ಶಾಸಕ ಯು ಟಿ ಖಾದರ್ ಹೇಳಿದರು.

ಪುದು ಗ್ರಾಮದ ಸುಜೀರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 42 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 4 ತರಗತಿ ಕೊಠಡಿಗಳ ಕಟ್ಟಡ ಕಾಮಗಾರಿಗೆ ಮಂಗಳವಾರ ಮಧ್ಯಾಹ್ನ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಊರವರ ಸಹಕಾರ ದೊರೆತರೆ ಮುಂದಿನ ದಿನಗಳಲ್ಲಿ ಪುದು ಗ್ರಾಮಕ್ಕೆ ಪಿಯುಸಿ ಹಾಗೂ ಪದವಿ ಕಾಲೇಜುಗಳನ್ನೂ ಸರಕಾರದಿಂದ ಒದಗಿಸಿಕೊಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಶೈಕ್ಷಣಿಕವಾಗಿ ಊರು ಬೆಳವಣಿಗೆ ಹೊಂದಿದಾಗ ಗ್ರಾಮದ ಪ್ರತಿಯೊಬ್ಬ ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್, ಐಎಎಸ್, ಐಪಿಎಸ್ ಅಧಿಕಾರಿಗಳಂತಹ ಉನ್ನತ ಹುದ್ದೆಗಳಲ್ಲಿ ರಾರಾಜಿಸಲು ಸಾಧ್ಯವಾಗಲಿದೆ ಎಂದು ಶಾಸಕ ಖಾದರ್ ಹೇಳಿದರು. ಗ್ರಾಮದ ಬಹುತೇಕ ರಸ್ತೆಗಳ ಅಭಿವೃದ್ದಿಗೂ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಪ್ರಯತ್ನಿಸಲಾಗುವುದು ಎಂದು ಖಾದರ್ ಇದೇ ವೇಳೆ ಭರವಸೆ ನೀಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜೀರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಹುಸೈನ್ ಅವರು ಮಾತನಾಡಿ ಇಲ್ಲಿನ ಶಾಲೆಯ ಶಿಥಿಲವಾದ ಕಟ್ಟಡಕ್ಕೆ ಕಾಯಕಲ್ಪ ಒದಗಿಸುವುದು ನಮ್ಮೆಲ್ಲರ ಬಹುಕಾಲದ ಬೇಡಿಕೆಯಾಗಿತ್ತು. ಈ ಒಂದು ಬೇಡಿಕೆಯನ್ನು ಶಾಸಕ ಖಾದರ್ ಇದೀಗ ಈಡೇರಿಸಿಕೊಟ್ಟಿದ್ದಾರೆ. ಗ್ರಾಮದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗಾಗಿ ಸ್ಪಂದಿಸಿದ ಖಾದರ್ ಅವರ ಸೇವೆಗೆ ಗ್ರಾಮದ ಜನ ಸದಾ ಚಿರೃಣಿ ಎಂದರು.

ಇದೇ ವೇಳೆ ಶಾಸಕ ಖಾದರ್ ಅವರನ್ನು ಶಾಲಾಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿ ಪಂ ಸದಸ್ಯ ರವೀಂದ್ರ ಕಂಬಳಿ, ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೊ, ಬಂಟ್ವಾಳ ತಾ ಪಂ ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಶಿಕ್ಷಣ ಇಲಾಖೆಯ ಸುಶೀಲ, ಗ್ರಾ ಪಂ ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ, ಪುದು ಗ್ರಾ ಪಂ ಸದಸ್ಯರುಗಳಾದ ಇಕ್ಬಾಲ್ ಸುಜೀರ್, ಭಾಸ್ಕರ ರೈ, ಕಿಶೋರ್ ಸುಜೀರ್, ಝಾಹಿರ್ ಕುಂಪಣಮಜಲು, ಲವೀನ ಕುಂಪಣಮಜಲು, ಹೇಮಲತಾ, ರಶೀದಾ ಮಾರಿಪಳ್ಳ, ಮಮ್ತಾಝ್ ಸುಜೀರ್, ರೆಹನಾ ಮಾರಿಪಳ್ಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಇಂತಿಯಾಝ್ ತುಂಬೆ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್, ಪುದು ಯುವ ಕಾಂಗ್ರೆಸ್ ಮುಖಂಡ ಮಜೀದ್ ಪೇರಿಮಾರ್, ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಶಾಂ ಫರಂಗಿಪೇಟೆ, ಪ್ರಮುಖರಾದ ಎಂ ಕೆ ಮುಹಮ್ಮದ್, ಸಲಾಂ ಮಲ್ಲಿ, ಬಿ ಎಂ ಮುಹಮ್ಮದ್ ತುಂಬೆ, ಅಶೋಕ್ ಶೆಟ್ಟಿ ಸುಜೀರ್, ಮಜೀದ್ ಫರಂಗಿಪೇಟೆ, ಇನ್ಶಾದ್ ಮಾರಿಪಳ್ಳ, ಇಸ್ಮಾಯಿಲ್ ಕುಂಜತ್ಕಲ, ಇಂತಿಯಾಝ್ ಮಾರಿಪಳ್ಳ, ಸದಾಶಿವ ಕುಮ್ಡೇಲು, ಸಲ್ಮಾನ್ ಫಾರಿಸ್, ರಿಲ್ವಾನ್ ಫರಂಗಿಪೇಟೆ, ಪಶ್ವತ್ ಪಚ್ಚು ಫರಂಗಿಪೇಟೆ, ಮಜೀದ್ ಕುಂಪಣಮಜಲು ಮೊದಲಾದವರು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿ, ಸುಮನಾ ಕಾರ್ಯಕ್ರಮ ನಿರೂಪಿಸಿದರು.














  • Blogger Comments
  • Facebook Comments

0 comments:

Post a Comment

Item Reviewed: ಊರವರ ಸಹಕಾರ ದೊರೆತಾಗ ಶಾಲೆಗಳು ಸುವ್ಯವಸ್ಥಿತವಾಗಿ ಬೆಳೆಯಲು ಸಾಧ್ಯ : ಶಾಸಕ ಖಾದರ್ Rating: 5 Reviewed By: karavali Times
Scroll to Top