ಆಂಧ್ರಪ್ರದೇಶ ಸರಕಾರವೂ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ ಆದೇಶ - Karavali Times ಆಂಧ್ರಪ್ರದೇಶ ಸರಕಾರವೂ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ ಆದೇಶ - Karavali Times

728x90

20 June 2020

ಆಂಧ್ರಪ್ರದೇಶ ಸರಕಾರವೂ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ ಆದೇಶ



ತಮಿಳುನಾಡು, ತೆಲಂಗಾಣ ಬಳಿಕ ಆಂಧ್ರ ಸರಕಾರದಿಂದಲೂ ವಿದ್ಯಾರ್ಥಿ ಹಿತದೃಷ್ಟಿಯಿಂದ ಮಹತ್ವದ ತೀರ್ಮಾನ


ಆಂಧ್ರಪ್ರದೇಶ (ಕರಾವಳಿ ಟೈಮ್ಸ್) : ಕೊರೋನಾ ಸೋಂಕು ತಹಬಂದಿಗೆ ಬಾರದ ಹಿನ್ನಲೆಯಲ್ಲಿ ಕಳೆದ ಮಾರ್ಚ್ ನಿಂದ ಮುಂದೂಡಿಕೆಯಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಆಂಧ್ರಪ್ರದೇಶ ಸರಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

 ಕೊರೋನಾ ಭಯದಿಂದಾಗಿ ಕಳೆದ ಮಾರ್ಚ್‌‌ನಲ್ಲಿ ನಡೆಯಬೇಕಿದ್ದ 10ನೇ ತರಗತಿ ಪರೀಕ್ಷೆಯನ್ನು ಎಲ್ಲಾ ರಾಜ್ಯಗಳು ತಾತ್ಕಾಲಿಕವಾಗಿ ಮುಂದೂಡಿದ್ದವು. ಬಳಿಕ ತಮಿಳ್ನಾಡು, ತೆಲಂಗಾಣ ಸರಕಾರಗಳು ಹತ್ತನೇ ತರಗತಿ ಪರೀಕ್ಷೆ ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಲು ಕ್ರಮ ಕೈಗೊಂಡಿತ್ತು.

ಇದೀಗ ಆಂಧ್ರಪ್ರದೇಶದ ಜಗನ್‌ಮೋಹನ್‌ ರೆಡ್ಡಿ ಸರ್ಕಾರ 10ನೇ ತರಗತಿ ಪರೀಕ್ಷೆಯನ್ನೇ ರದ್ದುಗೊಳಿಸಿ ಆದೇಶಿಸಿದೆ.
ಈ ಸಂಬಂಧ ಸ್ಪಷ್ಟೀಕರಣ ನೀಡಿರುವ ಆಂಧ್ರಪ್ರದೇಶದ ಶಿಕ್ಷಣ ಸಚಿವ ಆದಿಮುಲಾಪು ಸುರೇಶ್, "ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೊರೋನಾ ಸೋಂಕು ಈವರೆಗೆ ತಹಬಂದಿದೆ ಬಂದಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನೇ ರದ್ದು ಮಾಡಿದ್ದು ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಈವರೆಗೆ ಒಟ್ಟು 7961 ಕೊರೋನಾಪ್ರಕರಣಗಳು ದಾಖಲಿಸಿದ್ದು, 96 ಜನ ಮೃತಪಟ್ಟಿದ್ದಾರೆ. 3,948 ಜನ ಇನ್ನು ಚಿಕಿತ್ಸೆ ಪಡೆಯುತ್ತಿದ್ದು, ಇಂದು ಒಂದೇ ದಿನ 443 ಪ್ರಕರಣಗಳು ವರದಿಯಾಗಿದೆ.








  • Blogger Comments
  • Facebook Comments

0 comments:

Post a Comment

Item Reviewed: ಆಂಧ್ರಪ್ರದೇಶ ಸರಕಾರವೂ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ ಆದೇಶ Rating: 5 Reviewed By: karavali Times
Scroll to Top