ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಜಿಪನಡು-ಕಂಚಿನಡ್ಕಪದವು ಎಂಬಲ್ಲಿನ ಹಿಂದು ರುದ್ರಭೂಮಿಯಲ್ಲಿರುವ ಶಿವನ ಪ್ರತಿಮೆ ಕಟ್ಟೆಯ ಮೇಲೆ ಪಾದರಕ್ಷೆ ಧರಿಸಿ ಏರಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಲ್ಲದೆ ಟಿಕ್ ಟಾಕ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದಲ್ಲಿ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ನೇತೃತ್ವದ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಪತ್ತೆ ಹಚ್ಚಿ ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಜಿಪನಡು ಗ್ರಾಮದ ಮೊಹಮ್ಮದ್ ಮಸೂದ್ [20], ಮೊಹಮ್ಮದ್ ಅಜೀಮ್ [20], ಅಬ್ದುಲ್ ಲತೀಫ್ [20], ಮೊಹಮ್ಮದ್ ಅರ್ಫಾಜ್ [20] ಎಂದು ಗುರುತಿಸಲಾಗಿದೆ.
ಈ ಬಗ್ಗೆ ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕಲಂ 295 [ಎ], 297, 427 ಜೊತೆಗೆ 34 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment