ಮಂಗಳೂರು (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್ ಯುನಿಟ್ ವತಿಯಿಂದ ಆಟೋ, ಟ್ಯಾಕ್ಸಿ ಚಾಲಕರಿಗೆ ಲಾಕ್‍ಡೌನ್ ಪರಿಹಾರ ಧನಕ್ಕಾಗಿ ಉಚಿತ ಆನ್ ಲೈನ್ ಅರ್ಜಿ ಸಲ್ಲಿಸುವ ಶಿಬಿರವನ್ನು ವಳಚ್ಚಿಲ್‍ಪದವು ಮಲಾರ್ ಬಾವಾಕ ಅವರ ಅಂಗಡಿ ಕಟ್ಟಡದಲ್ಲಿ ನಡೆಸಲಾಯಿತು.
ಅಬ್ದುಲ್ ರಶೀದ್ ಹನೀಫಿ ವಳಚ್ಚಿಲ್‍ಪದವು ಅವರು ದುಆ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಲ್-ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಶಬೀರ್ ವಳಚ್ಚಿಲ್‍ಪದವು, ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್ ಶಾಖಾಧ್ಯಕ್ಷ ದಾವೂದ್, ಪ್ರಧಾನ ಕಾರ್ಯದರ್ಶಿ ಹಾರಿಸ್, ಶಂಸುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷ ಶಮೀರ್ ಶಾನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಾಲಿಕ್, ಎಸ್ಕೆಎಸ್ಸೆಸ್ಸೆಫ್ ಅಡ್ಯಾರ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷ ನಝೀರ್ ವಳಚ್ಚಿಲ್‍ಪದವು, ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್ ಶಾಖೆಯ ಸೈಬರ್ ವಿಂಗ್ ಮುಖ್ಯಸ್ಥ ನಸೀಬ್ ಸಿ.ಎಚ್., ಫರಾಝ್ ವಳಚ್ಚಿಲ್‍ಪದವು, ರಫೀಕ್ ಗೂಡಿನಬಳಿ, ಸಿನಾನ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment