ಭೋಪಾಲ್ (ಕರಾವಳಿ ಟೈಮ್ಸ್) : ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ), ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ (ಕಾಂಗ್ರೆಸ್) ಮತ್ತು ಸುಮೇರ್ ಸಿಂಗ್ ಸೋಲಂಕಿ (ಬಿಜೆಪಿ) ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕಣದಲ್ಲಿದ್ದ ಫೂಲ್ ಸಿಂಗ್ ಬರೈಯಾ (ಕಾಂಗ್ರೆಸ್) ಪರಾಭವಗೊಂಡಿದ್ದಾರೆ. ಮತಗಳ ಎಣಿಕೆ ಶುಕ್ರವಾರ ಸಂಜೆ ತಡವಾಗಿ ಮುಕ್ತಾಯವಾಯಿತು.
ಎಲ್ಲಾ 206 ಶಾಸಕರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ವಿಧಾನಸಭೆಯಲ್ಲಿ ಬಿಜೆಪಿಯ 107, ಕಾಂಗ್ರೆಸ್ ನ 92, ಬಹುಜನ ಸಮಾಜ ಪಕ್ಷದ ಇಬ್ಬರು, ಸಮಾಜವಾದಿ ಪಕ್ಷದ ಒಬ್ಬರು ಹಾಗೂ ನಾಲ್ವರು ಪಕ್ಷೇತರ ಶಾಸಕರಿದ್ದಾರೆ.
0 comments:
Post a Comment