ಕೆ.ಸಿ. ವೇಣುಗೋಪಾಲ್ |
ಜೈಪುರ (ಕರಾವಳಿ ಟೈಮ್ಸ್) : ಶಾಸಕರ ಕುದುರೆ ವ್ಯಾಪಾರದ ನಡುವೆಯೂ ರಾಜಸ್ಥಾನದಲ್ಲಿ ಆಡಳಿತರೂಢ ಕಾಂಗ್ರೆಸ್ ರಾಜ್ಯಸಭೆ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಹಾಗೂ ಪ್ರತಿಪಕ್ಷ ಬಿಜೆಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ ಅಭ್ಯರ್ಥಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ನೀರಜ್ ದಂಗಿ ಇಬ್ಬರೂ ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಬಿಜೆಪಿ ಇಬ್ಬರು ಅಭ್ಯರ್ಥಿಗಳ ಪೈಕಿ ಓರ್ವ ಅಭ್ಯರ್ಥಿ ರಾಜೇಂದ್ರ ಗೆಹ್ಲೋಟ್ ಅವರು ಮಾತ್ರ ಗೆಲುವು ಸಾಧಿಸಿದ್ದು, ಮತ್ತೊಬ್ಬ ಅಭ್ಯರ್ಥಿ ಓಂಕಾರ್ ಸಿಂಗ್ ಲಖಾವತ್ ಅವರು ಕೇವಲ 20 ಮತಗಳನ್ನು ಪಡೆಯುವ ಮೂಲಕ ಸೋಲು ಅನುಭವಿಸಿದ್ದಾರೆ.
ವೇಣುಗೋಪಾಲ್ ಅವರು 64 ಮತ, ನೀರಜ್ ದಂಗಿ ಅವರು 59 ಮತ ಹಾಗೂ ರಾಜೇಂದ್ರ ಗೆಹ್ಲೋಟ್ ಅವರು 54 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
200 ಸದಸ್ಯ ಬಲ ಹೊಂದಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 107 ಶಾಸಕರನ್ನು ಹೊಂದಿದೆ. ಅಲ್ಲದೆ ಆರ್.ಎಲ್.ಡಿ, ಸಿಪಿಎಂ, ಬಿಟಿಪಿ ಬೆಂಬಲದೊಂದಿಗೆ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
0 comments:
Post a Comment