ಪಂಚಾಯತ್ ಅಧ್ಯಕ್ಷರ ಸಕಾಲಿಕ ಸ್ಪಂದನೆಯಿಂದ ಗ್ರಾಮಸ್ಥರು ನಿರಾಳ
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ ಕುಂಜತ್ಕಲ ಎಂಬಲ್ಲಿ ಶನಿವಾರ ಮಧ್ಯರಾತ್ರಿ ವೇಳೆಗೆ ಸುರಿದ ಭಾರೀ ಗಾಳಿ ಮಳೆಗೆ ಇಲ್ಲಿನ ವಿದ್ಯುತ್ ಕಂಬ ಧರೆಗುರುಳಿ ಬಿದ್ದ ಪರಿಣಾಮ ಅಮೆಮ್ಮಾರ್ ಹಾಗೂ ಕುಂಜತ್ಕಲ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರ ಅಡಚಣೆಯಾಗಿದ್ದಲ್ಲದೆ ಪ್ರದೇಶದ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿದೆ.
ಅಪಾಯವನ್ನರಿತ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರಾದರೂ ಸಕಾಲದಲ್ಲಿ ಯಾರೂ ಸ್ಥಳಕ್ಕೆ ಬಾರದ ಹಿನ್ನಲೆಯಲ್ಲಿ ತಕ್ಷಣ ನಾಗರಿಕರು ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರನ್ನು ಸಂಪರ್ಕಿಸಿದರು. ತಕ್ಷಣ ಸ್ಥಳಕ್ಕಾಗಮಿಸಿದ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸಿದ್ದಾರೆ.
ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯ ನಜೀರ್ ಕುಂಜತ್ಕಲ, ಯುವ ಕಾಂಗ್ರೆಸ್ ಅಧ್ಯಕ್ಷ ನಿಝಾಂ ಕುಂಜತ್ಕಲ, ಪ್ರಮುಖರಾದ ಇಸ್ಮಾಯಿಲ್ ಕುಂಜತ್ಕಲ, ಸಮಿ ಕುಂಜತ್ಕಲ, ಗಫೂರ್ ಕುಂಜತ್ಕಲ, ಇಲಿಯಾಸ್ ಕರ್ಮರ, ಪುದು ಗ್ರಾಮ ಪಂಚಾಯತ್ ಸಿಬ್ಬಂದಿ ಸಲಾಂ ಸುಜೀರ್ ಮೊದಲಾದವರು ಸ್ಥಳದಲ್ಲಿದ್ದು ಸಹಕರಿಸಿದರು.
0 comments:
Post a Comment