ಬಂಟ್ವಾಳ (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ, ಪುಳಿಮಜಲು ನಿವಾಸಿ ಪುರುಷೋತ್ತಮ ಗೌಡ ಎಂಬವರ ಮನೆಯಲ್ಲಿ ಕಳೆದ ಬುಧವಾರ ಹಾಡಹಗಲೇ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸತ್ಯಾಂಶ ಬೇಧಿಸಿದ್ದು, ಮನೆಯೊಡತಿಯೇ ಕಳವು ಕಥೆ ಕಟ್ಟಿ ಚಿನ್ನಾಭರಣ ಅಡಗಿಸಿರುವುದು ಬೆಳಕಿಗೆ ಬಂದಿದೆ.
ಪುರುಷೋತ್ತಮ ಗೌಡ ಅವರ ಮನೆಯಲ್ಲಿ ಜೂನ್ 24 ರಂದು 1.80 ಲಕ್ಷ ರೂಪಾಯಿ ಮೌಲ್ಯದ ಒಟ್ಟು 60 ಗ್ರಾಂ ತೂಕದ ಚಿನ್ನಾಭರಣಗಳು ಕಳವು ನಡೆದಿದೆ ಎಂದು ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ವಿಚಾರಣೆ ನಡೆಸಿ ಫಿರ್ಯಾದಿ ಪುರುಷೋತ್ತಮ ಗೌಡರ ಪತ್ನಿ ಮಮತ ಅವರು ವೈಯಕ್ತಿಕ ಹಣಕಾಸಿನ ವ್ಯವಹಾರದ ನಿಮಿತ್ತ ಸದರಿ ಆಭರಣಗಳನ್ನು ಸ್ಥಳಾಂತರ ನಡೆಸಿ, ಫಿರ್ಯಾದಿಯ ಬಳಿ ಆಭರಣ ಕಳ್ಳತನವಾಗಿರುವುದಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂಬುದು ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿತೆ ತನ್ನ ಕೃತ್ಯವನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದು, ಆಕೆಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
0 comments:
Post a Comment