ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆ : ಎಲ್ಲಾ ಪ್ರಯಾಣಿಕ ರೈಲು ಸಂಚಾರ ಆಗಸ್ಟ್ 12ರವರೆಗೆ ರದ್ದು - Karavali Times ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆ : ಎಲ್ಲಾ ಪ್ರಯಾಣಿಕ ರೈಲು ಸಂಚಾರ ಆಗಸ್ಟ್ 12ರವರೆಗೆ ರದ್ದು - Karavali Times

728x90

25 June 2020

ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆ : ಎಲ್ಲಾ ಪ್ರಯಾಣಿಕ ರೈಲು ಸಂಚಾರ ಆಗಸ್ಟ್ 12ರವರೆಗೆ ರದ್ದು



ನವದೆಹಲಿ (ಕರಾವಳಿ ಟೈಮ್ಸ್) : ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಪ್ಯಾಸೆಂಜರ್ ರೈಲುಗಳನ್ನು  ಮುಂದಿನ ಆಗಸ್ಟ್ 12ರವರೆಗೆ ಭಾರತೀಯ ರೈಲ್ವೇ ಬೋರ್ಡ್ ರದ್ದು ಮಾಡಿದೆ.

 ಪ್ರತಿದಿನದ ಮೇಲ್, ಇಎಂಯು, ಪ್ಯಾಸೆಂಜರ್ ರೈಲುಗಳು, ಎಕ್ಸಪ್ರೆಸ್, ಸರ್ಬಬನ್ ರೈಲುಗಳ ಸಂಚಾರವೂ ಸ್ಥಗಿತಗೊಳ್ಳಲಿದೆ.ಆಗಸ್ಟ್ 12ವರೆಗೆ ಸೀಟು ಕಾಯ್ದಿರಿಸಿದ್ದ ಹಣ ಶೇ.100ರಷ್ಟು ರಿಫಂಡ್ ಆಗಲಿದೆ. ಮೇ 13ರಂದು ಹೊರಡಿಸಿದ್ದ ಆದೇಶದಲ್ಲಿ ಜೂನ್ 30ರವರಗೆ ರೆಗ್ಯೂಲರ್ ರೈಲುಗಳ ಬಂದ್ ಆಗಲಿದೆ ಎಂದು ಹೇಳಲಾಗಿತ್ತು. ಇದೀಗ ದಿನಾಂಕವನ್ನು ಆಗಸ್ಟ್ 12ರವರೆಗೆ ಮುಂದೂಡಿದೆ. ಮೇ 12ರಿಂದ ಆರಂಭವಾಗಿರುವ ರಾಜಧಾನಿ ಸೇರಿದಂತೆ ವಿಶೇಷ ರೈಲುಗಳ ಸಂಚಾರ ಎಂದಿನಂತೆ ಇರಲಿದೆ.

ರೈಲ್ವೇ ನಿಯಮಗಳ ಪ್ರಕಾರ, ಪ್ರಯಾಣಿಕರು 120 ದಿನಗಳ ಮುಂಚೆಯೇ ಟಿಕೆಟ್ ಬುಕ್ ಮಾಡಬಹುದು. ಎಪ್ರಿಲ್ ನಲ್ಲಿ ಪ್ರಯಾಣಿಕರು ಬುಕ್ ಮಾಡಿದ ಟಿಕೆಟ್ ಹಣ ಹಿಂದಿರುಗಿಸಲಾಗಿದೆ. ಜುಲೈನಲ್ಲಿ ಬುಕ್ ಮಾಡಿದ ಟಿಕೆಟ್ ಮೊತ್ತ ರಿಫಂಡ್ ಆಗಲಿದೆ ಎಂದು ಭಾರತೀಯ ರೈಲ್ವೇ ಬೋರ್ಡ್ ಹೇಳಿದೆ.









  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆ : ಎಲ್ಲಾ ಪ್ರಯಾಣಿಕ ರೈಲು ಸಂಚಾರ ಆಗಸ್ಟ್ 12ರವರೆಗೆ ರದ್ದು Rating: 5 Reviewed By: karavali Times
Scroll to Top