ರಮಾನಾಥ ರೈ ಸಲಹೆಯಿಂದ ಬಂಟ್ವಾಳ ಎಪಿಎಂಸಿಯಲ್ಲಿ ಹಲವು ಅಭಿವೃದ್ದಿ : ನಿರ್ಗಮನ ಅಧ್ಯಕ್ಷ ಪದ್ಮನಾಭ ರೈ - Karavali Times ರಮಾನಾಥ ರೈ ಸಲಹೆಯಿಂದ ಬಂಟ್ವಾಳ ಎಪಿಎಂಸಿಯಲ್ಲಿ ಹಲವು ಅಭಿವೃದ್ದಿ : ನಿರ್ಗಮನ ಅಧ್ಯಕ್ಷ ಪದ್ಮನಾಭ ರೈ - Karavali Times

728x90

18 June 2020

ರಮಾನಾಥ ರೈ ಸಲಹೆಯಿಂದ ಬಂಟ್ವಾಳ ಎಪಿಎಂಸಿಯಲ್ಲಿ ಹಲವು ಅಭಿವೃದ್ದಿ : ನಿರ್ಗಮನ ಅಧ್ಯಕ್ಷ ಪದ್ಮನಾಭ ರೈ



ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಎಪಿಎಂಸಿಯಲ್ಲಿ ಕಾಂಗ್ರೆಸ್ ಸದಸ್ಯರ ಎರಡು ಅವಧಿಯ ಆಡಳಿತದಲ್ಲಿ 1.7 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕಿನ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ 59 ರಸ್ತೆಗಳನ್ನು ನಿರ್ಮಿಸಲಾಗಿದ್ದು, ಮಾಣಿ, ಮಣಿನಾಲ್ಕೂರು ಮತ್ತು ಸಾಲೆತ್ತೂರುಗಳಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ ಎಂದು ನಿರ್ಗಮನ ಅಧ್ಯಕ್ಷ ಕೆ ಪದ್ಮನಾಭ ರೈ ತಿಳಿಸಿದರು.

ಗುರುವಾರ ಬಿ ಸಿ ರೋಡು ಸಮೀಪದ ಕೈಕುಂಜೆ ಎಪಿಎಂಸಿ ಕಛೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಬಂಟ್ವಾಳ ಎಪಿಎಂಸಿ ಕೈಗೊಂಡ ಕ್ರಮ ರಾಜ್ಯದ ಇತರ ಎಪಿಎಂಸಿಗಳಿಗೂ ಮಾದರಿಯಾಗಿದ್ದು, ಮಾಜಿ ಸಚಿವ ಬಿ ರಮಾನಾಥ ರೈ ಅವರ ಮುತುವರ್ಜಿ ಹಾಗೂ ಸಲಹೆ ಇದಕ್ಕೆ ಕಾರಣ ಎಂದರು.

ಎಪಿಎಂಸಿ ಮಾರುಕಟ್ಟೆ ಜಮೀನನ್ನು ಮೆಲ್ಕಾರ್ ಸಮೀಪ ಗುರುತಿಸಲಾಗಿದ್ದು, ಎಪಿಎಂಸಿ ಹೆಸರಿನಲ್ಲಿ ಮೀಸಲಿಡಲಾಗಿದೆ. ನಬಾರ್ಡ್ ಯೋಜನೆಯಡಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಣಿ, ಮಣಿನಾಲ್ಕೂರುಗಳಲ್ಲಿ ಮುಚ್ಚು ಹರಾಜುಕಟ್ಟೆ ನಿರ್ಮಿಸಿ ಆಯಾ ಪಂಚಾಯತಿಗಳ ನಿರ್ವಹಣೆಗೆ ನೀಡಲಾಗಿದೆ ಎಂದ ಪದ್ಮನಾಭ ರೈ ರೈತಸಂಜೀವಿನಿ ಅಪಘಾತ ವಿಮೆಯಡಿ 9 ಫಲಾನುಭವಿಗಳಿಗೆ 9.4 ಲಕ್ಷ ರೂಪಾಯಿ ವಿತರಿಸಲಾಗಿದೆ. ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಲಾಗಿದೆ. 1.25 ಕೋಟಿ ರೂಪಾಯಿ ವೆಚ್ಚದಲ್ಲಿ 1000 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡೌನ್ ನಿರ್ಮಾಣಕ್ಕೆ ಹಣ ಮೀಸಲಿಡಲಾಗಿದೆ. ಕೃಷಿಕರಿಗೆ 6 ತಿಂಗಳು ಬಡ್ಡಿರಹಿತ ಸಾಲ ನೀಡುವ ಯೋಜನೆಗೆ ಗೋಡೌನ್ ಕೊರತೆಯಿಂದಾಗಿ ಖಾಸಗಿ ಬಾಡಿಗೆ ಪಡೆಯಲು ಪ್ರಸ್ತಾಪ ಸಹಿತ ತಾಲೂಕಿನ ವಿವಿಧೆಡೆ ಮಾರುಕಟ್ಟೆ ಸಪ್ತಾಹ, ಕ್ಯಾಂಪೆÇ್ಕ ಮೂಲಕ ರೈತರ ಬೆಳೆ ಮಾರಾಟಕ್ಕೆ ಅವಕಾಶವನ್ನು ಕಾಂಗ್ರೆಸ್ ಅವಧಿಯಲ್ಲಿ ಕಲ್ಪಿಸಲಾಗಿದೆ ಎಂದವರು ಸುದ್ದಿಗಾರರಿಗೆ ವಿವರಿಸಿದರು.

ಮುಂದಿನ 20 ತಿಂಗಳ ಅವಧಿಯಲ್ಲಿ ನೂತನ ಅಧ್ಯಕ್ಷರು, ಸಮಿತಿಯೊಂದಿಗೆ ಸಹಕರಿಸಿ, ಬಾಕಿ ಉಳಿದ ಕಾಮಗಾರಿ ನಿರ್ವಹಣೆಗೆ ಸಹಕಾರ ನೀಡಲಿದ್ದೇವೆ ಎಂದು ಇದೇ ವೇಳೆ ಪದ್ಮನಾಭ ರೈ ತಿಳಿಸಿದರು. ಈ ಸಂದರ್ಭ ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಸದಸ್ಯರಾದ ಪದ್ಮರಾಜ ಬಲ್ಲಾಳ, ಚಂದ್ರಶೇಖರ ರೈ ಜೊತೆಗಿದ್ದರು.








  • Blogger Comments
  • Facebook Comments

0 comments:

Post a Comment

Item Reviewed: ರಮಾನಾಥ ರೈ ಸಲಹೆಯಿಂದ ಬಂಟ್ವಾಳ ಎಪಿಎಂಸಿಯಲ್ಲಿ ಹಲವು ಅಭಿವೃದ್ದಿ : ನಿರ್ಗಮನ ಅಧ್ಯಕ್ಷ ಪದ್ಮನಾಭ ರೈ Rating: 5 Reviewed By: karavali Times
Scroll to Top