ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಮತ್ತೆ ಆನ್‍ಲೈನ್ ತರಗತಿಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಎಲ್‍ಕೆಜಿಯಿಂದ ಹಿಡಿದು ಎಸ್‍ಎಸ್‍ಎಲ್‍ಸಿವರೆಗೂ ಇನ್ನು ಕೆಲ ನಿಯಮಗಳನ್ನು ಪಾಲಿಸಿಕೊಂಡು ಆನ್‍ಲೈನ್ ತರಗತಿಗಳನ್ನು ನಡೆಸಬಹುದಾಗಿದೆ.
ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ವರದಿ ಬರುವವರೆಗೂ ಈ ನಿಯಮಗಳ ಅನುಸಾರವೇ ಆನ್‍ಲೈನ್ ತರಗತಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಬೇಕಾಗುತ್ತದೆ. ಆನ್‍ಲೈನ್ ತರಗತಿಗೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ. ಇದಕ್ಕೆ ತಗುಲುವ ವೆಚ್ಚವನ್ನು ನಿಯಮಿತವಾಗಿ ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕು ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಆನ್‍ಲೈನ್ ತರಗತಿಗೆ ಸರಕಾರ ವಿಧಿಸಿದ ನಿಯಮಗಳು ಕೆಳಗಿನಂತಿವೆ
1. ಪೂರ್ವ ಪ್ರಾಥಮಿಕ : 30 ನಿಮಿಷಗಳಿಗೆ ಮೀರದಂತೆ ವಾರಕ್ಕೆ ಒಂದು ದಿನ ಆನ್‍ಲೈನ್ ಕ್ಲಾಸ್ (ಪಾಲಕರು ಜೊತೆಯಲ್ಲಿ ಇರುವುದು ಕಡ್ಡಾಯ)
2. 1-5 ನೇ ತರಗತಿ : 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ದಿನ ಬಿಟ್ಟು ದಿನ ಆನ್‍ಲೈನ್ ಕ್ಲಾಸ್
3. 6-8 ನೇ ತರಗತಿ : 30-40 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್‍ಲೈನ್ ಶಿಕ್ಷಣ
4. 9-10 ನೇ ತರಗತಿ : 30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್‍ಲೈನ್ ಕ್ಲಾಸ್.
0 comments:
Post a Comment